masthmagaa.com:

ಕಳೆದ 11 ತಿಂಗಳಿನಿಂದ ಹಾವಳಿ ಇಡ್ತಿರೋ ಕೊರೋನಾ ವೈರಸ್ ಇದುವರೆಗೆ ಬರೋಬ್ಬರಿ 5 ಕೋಟಿ ಜನರಿಗೆ ತಗುಲಿದಂತಾಗಿದೆ. ಹೌದು ಜಾಗತಿಕ ಕೊರೋನಾ ಸೋಂಕಿತರ ಸಂಖ್ಯೆ 5 ಕೋಟಿ ಗಡಿ ದಾಟಿದೆ ಅಂತ ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ತಿಳಿಸಿದೆ. ಇದರಲ್ಲಿ 12.56 ಲಕ್ಷ ಸೋಂಕಿತರು ಈಗಾಗಲೇ ಪ್ರಾಣ ಕೂಡ ಕಳೆದುಕೊಂಡಾಗಿದೆ. ಹಾಗೇ 3.30 ಕೋಟಿ ಸೋಂಕಿತರು ಜಗತ್ತಿನಾದ್ಯಂತ ಗುಣಮುಖ ಕೂಡ ಆಗಿದ್ದಾರೆ. ಜಾಗತಿಕ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ, ಭಾರತ ಮತ್ತು ಬ್ರೆಜಿಲ್ ಮೊದಲ ಮೂರು ಸ್ಥಾನದಲ್ಲಿ ಮುಂದುವರಿದಿವೆ.

ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ 93,000+ ಜನರಿಗೆ ಸೋಂಕು ತಗುಲಿದೆ. ಕಳೆದ ಕೆಲ ದಿನಗಳಿಂದ ಅಮೆರಿಕದಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಕರಣ ದೃಢಪಡುತ್ತಿತ್ತು. ಆದ್ರೀಗ ಈ ನಂಬರ್ 1 ಲಕ್ಷಕ್ಕೂ ಕಮ್ಮಿಯಾಗಿರೋದು ಸ್ವಲ್ಪ ಸಮಾಧಾನದ ವಿಚಾರ. ಭಾರತದಲ್ಲಿ 45,000+ ಜನರಿಗೆ ಸೋಂಕು ತಗುಲಿದೆ. ಕೊರೋನಾ ಸೋಂಕಿನ ಎರಡನೇ ಅಲೆ ಎದ್ದಿರುವ ಫ್ರಾನ್ಸ್​ನಲ್ಲಿ 38,000+, ಇಟಲಿಯಲ್ಲಿ 32,000+ ಮತ್ತು ಬ್ರಿಟನ್​ನಲ್ಲಿ 20,000+ ಜನರಿಗೆ ಕಳೆದ 24 ಗಂಟೆಗಳಲ್ಲಿ ಸೋಂಕು ತಗುಲಿದೆ. ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಕೇವಲ 33 ಜನರಿಗೆ ಹೊಸದಾಗಿ ಸೋಂಕು ತಾಗಿದೆ. ಎಲ್ಲವೂ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದೆ ಅಂತ ಚೀನಾ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply