20 ದಿನಗಳಲ್ಲಿ ಭಾರತ-ಚೀನಾ ಗಡಿಯಲ್ಲಿ 3 ಬಾರಿ ಗುಂಡಿನ ಸದ್ದು..!

masthmagaa.com:

ದೆಹಲಿ: ಕಳೆದ 20 ದಿನಗಳಲ್ಲಿ ಪೂರ್ವ ಲಡಾಕ್​​ನಲ್ಲಿ 3 ಬಾರಿ ಗುಂಡಿನ ಸದ್ದು ಮೊಳಗಿದೆ ಅಂತ ಸೇನೆಯ ಮೂಲಗಳು ತಿಳಿಸಿವೆ. 45 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ-ಚೀನಾ ಗಡಿಯಲ್ಲಿ ಗುಂಡಿನ ಸದ್ದು ಮೊಳಗಿದೆ. ಮೊದಲ ಬಾರಿಗೆ ಆಗಸ್ಟ್​​ 29-30ರಂದು ಪ್ಯಂಗಾಂಗ್ ಸರೋವರದ ದಕ್ಷಿಣ ದಡದಲ್ಲಿ ಯಥಾಸ್ಥಿತಿ ಬದಲಾವಣೆ ಮಾಡಲು ಯತ್ನಿಸಿದಾಗ ಗುಂಡಿನ ಸದ್ದು ಮೊಳಗಿತ್ತು. ಇದಾದ ಬಳಿಕ ಸೆಪ್ಟೆಂಬರ್ 7ರಂದು ಮುಖ್​ಪರಿ ಹೈಟ್ ಬಳಿ ಗುಂಡು ಹಾರಿಸಲಾಗಿತ್ತು. ನಂತರದಲ್ಲಿ ಸೆಪ್ಟೆಂಬರ್ 8ರಂದು ಪ್ಯಂಗಾಂಗ್​ ಸರೋವರದ ಉತ್ತರ ದಡದಲ್ಲಿ ಎರಡೂ ದೇಶದ ಸೇನೆ ನಡುವೆ 100 ಸುತ್ತುಗಳಷ್ಟು ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಚೀನೀ ಸೈನಿಕರು ಆಕ್ರಮಣಕಾರಿಯಾಗಿ ವರ್ತಿಸಿದ್ದರು ಅಂತ ಸೇನಾ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply