2 ದಿನದಲ್ಲಿ 7 ಉಗ್ರರು ಮಟಾಷ್..! ಓರ್ವ ಯೋಧ ಹುತಾತ್ಮ

masthmagaa.com:

ಕಾಶ್ಮೀರ: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಮೂವರು ಲಷ್ಕರ್ ಎ ತೊಯ್ಬಾ ಉಗ್ರರನ್ನು ಹೊಡೆದುರುಳಿಸಲಾಗಿದೆ. ಇಲ್ಲಿನ ಝಡೋರಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಯೋಧರು ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿದ್ರು. ಈ ವೇಳೆ ಮೂವರು ಉಗ್ರರು ಹತರಾದ್ರೆ, ನಮ್ಮ ಯೋಧರೊಬ್ಬರು ಕೂಡ ಹುತಾತ್ಮರಾಗಿದ್ದಾರೆ.

ಕಳೆದ 24 ಗಂಟೆಯಲ್ಲಿ ನಡೆದ 2ನೇ ಕಾರ್ಯಾಚರಣೆ ಇದಾಗಿದ್ದು, ನಿನ್ನೆ ಶೋಪಿಯಾನ್ ಜಿಲ್ಲೆಯ ಕಿಲೂರಾದಲ್ಲೂ ನಾಲ್ವರು ಉಗ್ರರನ್ನು ಹೊಡೆದು ಹಾಕಿ, ಓರ್ವನನ್ನು ಸೆರೆ ಹಿಡಿಯಲಾಗಿತ್ತು. ಹತರಾದ ನಾಲ್ವರಲ್ಲಿ ಇಬ್ಬರು ಪಂಚಾಯ್ತಿ ಸದಸ್ಯ, ಬಿಜೆಪಿ ನಾಯಕನ ಅಪಹರಣ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದರು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply