ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿಢೀರ್ ಏರಿಕೆ.. ಹೆಚ್ಚಿದ ಆತಂಕ..!

masthmagaa.com:

ದೇಶದಲ್ಲಿ ಕೊರೋನಾ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 258ಕ್ಕೆ ಏರಿಕೆಯಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.  ಶುಕ್ರವಾರ ಒಂದೇ ದಿನ 50 ಹೊಸ ಪ್ರಕರಣಗಳು ದೃಢಪಟ್ಟಿತ್ತು. ಶನಿವಾರ ಬೆಳಗ್ಗೆ 9 ಗಂಟೆವರೆಗೆ ಮತ್ತೆ 35 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 250ರ ಗಡಿ ದಾಟಿದೆ. ಈ ಪೈಕಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಹಾಗೂ ಪಂಜಾಬ್​ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

258 ಜನ ಕೊರೋನಾ ಸೋಂಕಿತರಲ್ಲಿ 219 ಮಂದಿ ಭಾರತೀಯರಾಗಿದ್ದು, 39 ಜನ ವಿದೇಶಿಗರಾಗಿದ್ದಾರೆ. ಇದುವರೆಗೆ 23 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿರೋದು ಮಹಾರಾಷ್ಟ್ರದಲ್ಲಿ. ಅಲ್ಲಿ 52 ಪ್ರಕರಣಗಳು ಬೆಳಕಿಗೆ ಬಂದಿವೆ. ಉಳಿದಂತೆ ಕೇರಳದಲ್ಲಿ 40, ದೆಹಲಿಯಲ್ಲಿ 26, ಉತ್ತರಪ್ರದೇಶದಲ್ಲಿ 24, ತೆಲಂಗಾಣದಲ್ಲಿ 19, ರಾಜಸ್ಥಾನದಲ್ಲಿ 17, ಹರಿಯಾಣದಲ್ಲಿ 17, ಕರ್ನಾಟಕದಲ್ಲಿ 15 ಪ್ರಕರಣಗಳು ದೃಢಪಟ್ಟಿವೆ.

-masthmagaa.com

Contact Us for Advertisement

Leave a Reply