ಮೇ 3ರವರೆಗೂ ರೈಲು ಸಂಚಾರ, ವಿಮಾನ ಹಾರಾಟ ಬಂದ್..!

masthmagaa.com:

ಪ್ರಧಾನಿ ನರೇಂದ್ರ ಮೋದಿ ದೇಶವ್ಯಾಪಿ ಲಾಕ್​ಡೌನ್​ ಅನ್ನು ಮೇ 3ರವರೆಗೆ ವಿಸ್ತರಣೆ ಮಾಡುತ್ತಿದ್ದಂತೆಯೇ ರೈಲು ಮತ್ತು ವಿಮಾನ ಹಾರಾಟದ ಮೇಲಿದ್ದ ನಿರ್ಬಂಧವನ್ನ ಕೂಡ ವಿಸ್ತರಿಸಲಾಗಿದೆ. ಎಲ್ಲಾ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆ ಮೇ 3ರ ರಾತ್ರಿ 11.59ರವರೆಗೆ ಸ್ಥಗಿತಗೊಳ್ಳಲಿದೆ ಅಂತ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಅದೇ ರೀತಿ ಎಲ್ಲಾ ಪ್ಯಾಸೆಂಜರ್ ರೈಲು, ಮೇಲ್ ಎಕ್ಸ್​ಪ್ರೆಸ್, ಪ್ರೀಮಿಯಂ ಟ್ರೈನ್, ಸಬ್​-ಅರ್ಬನ್ ಟ್ರೈನ್, ಕೊಲ್ಕತ್ತಾ ಮೆಟ್ರೋ ಟ್ರೈನ್, ಕೊಂಕಣ್ ರೈಲು ಸೇವೆ ಸೇರಿದಂತೆ ಎಲ್ಲಾ ರೈಲುಗಳ ಸಂಚಾರ ನಿರ್ಬಂಧವನ್ನು ಮೇ 3ರ ಮಧ್ಯರಾತ್ರಿವರೆಗೆ ವಿಸ್ತರಿಸಲಾಗಿದೆ ಅಂತ ರೈಲ್ವೆ ಸಚಿವಾಲಯ ತಿಳಿಸಿದೆ. ರೈಲು ಸಂಚಾರ ರದ್ದಾದ ಹಿನ್ನೆಲೆ ಐಆರ್‌ಸಿಟಿಸಿ ಸ್ವಯಂಚಾಲಿತ ಪೂರ್ಣ ಮರುಪಾವತಿಯನ್ನ ಒದಗಿಸಲಿದೆ. ಅಂದ್ರೆ ಈಗಾಗಲೇ ಟಿಕೆಟ್​ ಬುಕ್ ಮಾಡಿರುವವರು ತಮ್ಮ ಇ-ಟಿಕೆಟ್‌ಗಳನ್ನು ರದ್ದುಗೊಳಿಸುವ ಅಗತ್ಯವಿಲ್ಲ. ಅವರ ಖಾತೆಗಳಿಗೆ ಟಿಕೆಟ್​ನ ಪೂರ್ಣ ಶುಲ್ಕವನ್ನ ಮತ್ತೆ ಜಮಾ ಮಾಡಲಾಗುತ್ತದೆ.

-masthmagaa.com

Contact Us for Advertisement

Leave a Reply