masthmagaa.com:

ಕೊರೋನಾ ಪರೀಕ್ಷೆ ವಿಚಾರದಲ್ಲಿ ಅಮೆರಿಕ ಉತ್ತಮ ಸಾಧನೆ ಮಾಡಿದೆ ಅಂತ ಭಾರತದ ಪ್ರಧಾನಿ ಮೋದಿ ನನಗೆ ಕಾಲ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕೊರೋನಾ ಬಿಕ್ಕಟ್ಟನ್ನು ಟ್ರಂಪ್ ಸರ್ಕಾರ ಸರಿಯಾಗಿ ನಿರ್ವಹಿಸಿಲ್ಲ ಅಂತ ವಿಪಕ್ಷಗಳು ಆರೋಪ ಮಾಡುತ್ತಿರುವಾಗಲೇ ಈ ಹೇಳಿಕೆ ಹೊರಬಿದ್ದಿದೆ.

‘ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ನಡೆಸಿದ ಕೊರೋನಾ ಪರೀಕ್ಷೆಗಳಿಗಿಂತ ನಾವು ತುಂಬಾ ಮುಂದಿದ್ದೇವೆ. ದೊಡ್ಡ ದೊಡ್ಡ ದೇಶಗಳ ಕೊರೋನಾ ಪರೀಕ್ಷೆಗಳನ್ನ ಒಟ್ಟಿಗೆ ಸೇರಿಸಿದ್ರೂ ನಾವು ಹೆಚ್ಚು ಪರೀಕ್ಷೆ ನಡೆಸಿದ್ದೇವೆ. ಅಮೆರಿಕ ನಂತರದ ಸ್ಥಾನದಲ್ಲಿ ಭಾರತ ಇದೆ. ನಮ್ಮಲ್ಲಿ ಭಾರತಕ್ಕಿಂತ 4.4 ಕೋಟಿ ಹೆಚ್ಚು ಪರೀಕ್ಷೆಗಳನ್ನ ನಡೆಸಲಾಗಿದೆ. ಈ ಬಗ್ಗೆ ನನಗೆ ಕಾಲ್ ಮಾಡಿದ ಪ್ರಧಾನಿ ಮೋದಿ, ಕೊರೋನಾ ಪರೀಕ್ಷೆಯಲ್ಲಿ ನೀವು ಉತ್ತಮ ಸಾಧನೆ ಮಾಡಿದ್ದೀರಿ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಅಂತ ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಮಾತಿನ ಅರ್ಥ, ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರೋದಕ್ಕೆ ಹೆಚ್ಚೆಚ್ಚು ಪರೀಕ್ಷೆ ನಡೆಸಿದ್ದೇ ಕಾರಣ ಅನ್ನೋದು. ಜೊತೆಗೆ ಮುಂಬರುವ ಚುನಾವಣೆಗೆ ಅನಿವಾಸಿ ಭಾರತೀಯರ ಮತಗಳನ್ನು ಸೆಳೆಯಲು ಮೋದಿ ಮತ್ತು ಭಾರತದ ಹೆಸರನ್ನು ಟ್ರಂಪ್ ಬಳಸುತ್ತಿದ್ದಾರೆ.

ಅಂದ್ಹಾಗೆ ಅಮೆರಿಕದಲ್ಲಿ ಇದುವರೆಗೆ ಸುಮಾರು 9 ಕೋಟಿ ಜನರ ಸ್ಯಾಂಪಲ್​ಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 65 ಲಕ್ಷ ಜನರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಭಾರತದಲ್ಲಿ 5.72 ಕೋಟಿ ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 48 ಲಕ್ಷ ಜನರಿಗೆ ಸೋಂಕು ದೃಢಪಟ್ಟಿದೆ.

-masthmagaa.com

Contact Us for Advertisement

Leave a Reply