ಶಾಲಾ-ಕಾಲೇಜು ಯಾವಾಗ ಓಪನ್..? ಕೇಂದ್ರದ ಪ್ಲಾನ್ ಹೀಗಿದೆ..

masthmagaa.com:

ದೇಶದಲ್ಲಿ ಲಾಕ್​ಡೌನ್ ನಿರ್ಬಂಧಗಳು ಸಡಿಲವಾಗುತ್ತಿರುವ ಬೆನ್ನಲ್ಲೇ ಜೂನ್​ನಲ್ಲಿ ಶಾಲಾ-ಕಾಲೇಜುಗಳು ಕೂಡ ಆರಂಭವಾಗುತ್ತವೆ ಅನ್ನೋ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಆದ್ರೆ ಶೈಕ್ಷಣಿಕ ಸಂಸ್ಥೆಗಳು ಜೂನ್​ನಲ್ಲಿ ಆರಂಭವಾಗುವ ಬದಲು ಜುಲೈ ಅಂತ್ಯ ಅಥವಾ ಆಗಸ್ಟ್​ನಲ್ಲಿ ಆರಂಭವಾಗುವ ಬಗ್ಗೆ ಕೇಂದ್ರ ಸರ್ಕಾರದಿಂದ ಮುನ್ಸೂಚನೆ ಸಿಕ್ಕಿದೆ.

ಈ ಬಗ್ಗೆ ಎನ್​ಡಿಟಿವಿ ಜೊತೆ ಮಾತನಾಡಿರೋ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್, ಲಾಕ್​ಡೌನ್​ನಿಂದ ಮುಂದೂಡಲ್ಪಟ್ಟಿದ್ದ 10 ಮತ್ತು 12ನೇ ತರಗತಿಯ ಬೋರ್ಡ್​ ಎಕ್ಸಾಂಗಳು ಜುಲೈ 1ರಿಂದ 15ರವರೆಗೆ ನಡೆಯಲಿದೆ. ಅದಾದ ಬಳಿಕವೇ ಶಾಲಾ-ಕಾಲೇಜುಗಳು ಓಪನ್ ಆಗಬಹುದು ಎಂದಿದ್ದಾರೆ.

ದೇಶದಲ್ಲಿ ಕೊರೋನಾ ಹಾವಳಿ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಪರೀಕ್ಷೆಗಳನ್ನ ಹೇಗೆ ನಡೆಸುತ್ತೀರಿ ಅಂತ ಕೇಳಿದ ಪ್ರಶ್ನೆಗೆ, ‘ಜುಲೈನಲ್ಲಿ ಪರಿಸ್ಥಿತಿ ಹೇಗಿರುತ್ತೆ ಅಂತ ನಾವು ಈಗಲೇ ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿ ಸುಧಾರಿಸುತ್ತದೆ ಅನ್ನೋ ಭರವಸೆ ನನಗಿದೆ. ಒಂದ್ವೇಳೆ ಸುಧಾರಿಸದಿದ್ದರೆ ಕೇಂದ್ರ ಗೃಹ ಇಲಾಖೆ, ಆರೋಗ್ಯ ಇಲಾಖೆ, ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆ ಚರ್ಚಿಸುತ್ತೇವೆ. ಮುಂದಿನ ನಡೆ ಕುರಿತು ಸಲಹೆಗಳನ್ನ ಪಡೆಯುತ್ತೇವೆ’ ಅಂತ ಪೋಖ್ರಿಯಾಲ್ ಹೇಳಿದ್ದಾರೆ.

ಈಗ ಉಳಿದಿರುವ ಬೋರ್ಡ್​ ಎಕ್ಸಾಂಗಳನ್ನ ಜುಲೈನಲ್ಲೂ ಮತ್ತು ಯುನಿವರ್ಸಿಟಿ ಎಕ್ಸಾಂಗಳನ್ನ ಆಗಸ್ಟ್​ನಲ್ಲಿ ನಡೆಸಲಾಗುತ್ತದೆ. ಫೈನಲ್ ಇಯರ್ ಸ್ಟೂಡೆಂಟ್ಸ್ ಪರೀಕ್ಷೆಗೆ ಹಾಜರಾಗಲಿದ್ದಾರೆ. ಫಸ್ಟ್​ ಮತ್ತು ಸೆಕೆಂಡ್​ ಇಯರ್ ಸ್ಟೂಡೆಂಟ್ಸ್​ಗಳನ್ನು ಆಂತರಿಕ ಮೌಲ್ಯಮಾಪನ ಆಧಾರದ ಮೇಲೆ ಬಡ್ತಿ ನೀಡಲಾಗುವುದು. NCERTಯ ಒಂದು ಟಾಸ್ಕ್ ಫೋರ್ಸ್ ಪರಿಸ್ಥಿತಿಯನ್ನ ಅವಲೋಕಿಸಿ ಶಾಲಾ-ಕಾಲೇಜುಗಳ ಪುನಾರಂಭ ಬಗ್ಗೆ ಪ್ಲಾನ್​ ಸಲ್ಲಿಸಲಿದೆ ಅಂತ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply