masthmagaa.com:

ಫೈಝರ್ ಲಸಿಕೆ ಬಳಿಕ ಇದೀಗ ಮೊಡೆರ್ನಾ ಲಸಿಕೆಯಲ್ಲೂ ಅಡ್ಡ ಪರಿಣಾಮ ಕಂಡುಬಂದಿದೆ. ಲಸಿಕೆ ಪಡೆದ ಕೆಲವೇ ಕ್ಷಣಗಳಲ್ಲಿ ಅಮೆರಿಕದ ಬೋಸ್ಟನ್ ಮೂಲದ ವೈದ್ಯನಿಗೆ ಗಂಭೀರ ಪ್ರಮಾಣದ ಅಲರ್ಜಿ ಉಂಟಾಗಿದೆ ಅಂತ ವರದಿಯಾಗಿದೆ. ಮೊಡೆರ್ನಾ ಲಸಿಕೆಯಿಂದ ಅಡ್ಡ ಪರಿಣಾಮ ವರದಿಯಾದ ಮೊದಲ ಪ್ರಕರಣ ಇದಾಗಿದೆ. ಅಮೆರಿಕದಲ್ಲಿ ಈ ವಾರವಷ್ಟೇ ಮೊಡೆರ್ನಾ ಲಸಿಕೆಯನ್ನ ಜನರಿಗೆ ಹಾಕಲು ಶುರು ಮಾಡಲಾಗಿತ್ತು.

ವೈದ್ಯನಿಗೆ ಕಪ್ಪೆಚಿಪ್ಪು ತಿಂದಾಗ ಅಲರ್ಜಿ ಆಗ್ತಿತ್ತು ಅನ್ನೋದು ಗೊತ್ತಾಗಿದೆ. ಆದ್ರೀಗ ಲಸಿಕೆ ಪಡೆದಾಗ ಅಲರ್ಜಿ ಉಂಟಾಗಿ ತಲೆ ಸುತ್ತುವಿಕೆ ಮತ್ತು ಎದೆ ಬಡಿತ ಜಾಸ್ತಿಯಾಗಿದೆ ಅಂತ ವೈದ್ಯ ಹೇಳಿದ್ದಾನೆ. ಈ ಹಿಂದೆ ಫೈಝರ್ ಲಸಿಕೆ ಪಡೆದ ಕೆಲವರಲ್ಲೂ ಅಡ್ಡ ಪರಿಣಾಮ ಕಾಣಿಸಿಕೊಂಡಿತ್ತು. ಅಡ್ಡ ಪರಿಣಾಮದ ಬಗ್ಗೆ ಎರಡೂ ಕಂಪನಿಗಳು ತನಿಖೆ ನಡೆಸುತ್ತಿವೆ.

-masthmagaa.com

Contact Us for Advertisement

Leave a Reply