ಮತ್ತೆ ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಿದ ಅಮೆರಿಕ!

masthmagaa.com:

ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿಚಾರದಲ್ಲಿ ಅಮೆರಿಕ ಮತ್ತೊಮ್ಮೆ ಮೂಗು ತೂರಿಸಿದೆ. ಇತ್ತೀಚಿಗಷ್ಟೇ ಕೇಜ್ರಿವಾಲ್‌ ವಿಚಾರ ಸೇರಿದಂತೆ ಭಾರತದ ಯಾವುದೇ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡ್ಬಾರ್ದು ಅಂತ ಅಮೆರಿಕದ ರಾಯಭಾರಿಗಳಿಗೆ ಭಾರತ ಸಮನ್ಸ್‌ ನೀಡಿತ್ತು. ಆದ್ರೆ ಸಮನ್ಸ್‌ ನೀಡಿದ ಕೆಲವೇ ಘಂಟೆಗಳಲ್ಲಿ ಅಮೆರಿಕದ ಸ್ಟೇಟ್‌ ಡಿಪಾರ್ಟಮೆಂಟ್‌ನ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಮತ್ತೆ ಕೇಜ್ರಿವಾಲ್‌ರ ಬಂಧನ ಸೇರಿದಂತೆ ಎಲ್ಲ ವಿಚಾರಗಳನ್ನ ನಾವು ಕ್ಲೋಸ್‌ ಆಗಿ ಮಾನಿಟರ್‌ ಮಾಡೊದನ್ನ ಕಂಟಿನ್ಯೂ ಮಾಡ್ತೀವಿ ಅಂತೇಳಿದ್ದಾರೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಪರಿಣಾಮಕಾರಿ ಪ್ರಚಾರ ಮಾಡಲು ಸಾಧ್ಯವಾಗದ ಹಾಗೆ ಅವ್ರ ಬ್ಯಾಂಕ್‌ ಅಕೌಂಟ್‌ನ್ನ ಸ್ಥಗಿತಗೊಳಿಸಿದ್ದಾರೆ ಅನ್ನೋ ವಿಚಾರ ಕೂಡ ನಮಗೆ ಗೊತ್ತಾಗಿದೆ. ಹೀಗಾಗಿ ಎಲ್ಲ ಪ್ರಕರಣಗಳಲ್ಲಿ ನ್ಯಾಯೋಚಿತ, ಸಮಯೋಚಿತ ಹಾಗೂ ಪಾರದರ್ಶಕ ಕಾನೂನು ಪ್ರಕ್ರಿಯೆ ಆಗೋದನ್ನ ನಾವು ಎನ್‌ಕರೇಜ್‌ ಮಾಡ್ತೇವೆʼ ಅಂತ ಮಿಲ್ಲರ್‌ ಹೇಳಿದ್ದಾರೆ. ಈ ಮೂಲಕ ಭಾರತದ ವಿರುದ್ದ ಮತ್ತೆ ಅಮೆರಿಕ ತನ್ನ ನಾಲಿಗೆ ಹರಿಬಿಟ್ಟಿದೆ. ಅಂದ್ಹಾಗೆ ಮಿಲ್ಲರ್‌ ಹೇಳಿಕೆಗೆ ಅಮೆರಿಕದ ರಾಯಭಾರಿಗಳಿಗೆ ಭಾರತ ಸಮನ್ಸ್‌ ನೀಡಿ, ನಮ್ಮ ಆಂತರಿಕ ವಿಚಾರಗಳಲ್ಲಿ ತಲೆ ಹಾಕಿದ್ರೆ ಅನಾರೋಗ್ಯಕರ ಬೆಳವಣಿಗೆಯಾಗ್ಬಹುದು ಅಂತೇಳಿತ್ತು. ಆದ್ರೆ ಅಮೆರಿಕ ಪುಂಡಾಟಿಕೆ ಮೆರೆದಿದೆ.

-masthmagaa.com

Contact Us for Advertisement

Leave a Reply