ಚೀನಾದಿಂದ ಮುಸ್ಲಿಮರ ನರಸಂಹಾರ: ಅಮೆರಿಕ

masthmagaa.com:

ಅಮೆರಿಕ: ಚೀನಾ ಕ್ಸಿಂಜಿಯಾಂಗ್ ವಲಯದಲ್ಲಿ ಮುಸ್ಲಿಮರ ನರಸಂಹಾರದಂತಹ ಕೃತ್ಯವನ್ನು ಎಸಗುತ್ತಿದೆ ಅಂತ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್​ ಒಬ್ರಿಯಾನ್ ಹೇಳಿದ್ದಾರೆ. ಆಸ್ಪನ್​​ ಇನ್​ಸ್ಟಿಟ್ಯೂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಂಗ್​​ಕಾಂಗ್​ನಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ಪರವಾದ ಚಳವಳಿ ಬಗ್ಗೆ ಪ್ರಸ್ಥಾಪಿಸಿದ್ರು. ಈ ವೇಳೆ ಚೀನಾ ಕ್ಸಿಂಜಿಯಾಂಗ್ ಪ್ರದೇಶದಲ್ಲಿ ಉಯಿಘರ್ ಮುಸ್ಲಿಂ ಮತ್ತು ಇತರೆ ಅಲ್ಪಸಂಖ್ಯಾತ ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಳ್ತಿದೆ. ನರಸಂಹಾರ ಅಲ್ಲದಿದ್ರೂ ಅದಕ್ಕೆ ಹತ್ತಿರವಾದ ಕೃತ್ಯವನ್ನು ಎಸಗುತ್ತಿದೆ ಅಂತ ಹೇಳಿದ್ದಾರೆ.

ಅಷ್ಟೇ ಅಲ್ಲ.. ಅಮೆರಿಕದ ಕಸ್ಟಮ್ಸ್ ಅಧಿಕಾರಿಗಳು ಮನುಷ್ಯರ ಕೂದಲಿನಿಂದ ಮಾಡಲ್ಪಟ್ಟ ಕೆಲವೊಂದು ಕೂದಲು ಸಂಬಂಧಿತ ವಸ್ತುಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಇವೆಲ್ಲವೂ ಕ್ಸಿಂಜಿಯಾಂಗ್ ಪದೇಶದಲ್ಲೇ ಉತ್ಪಾದಿಸಲಾದ ಉತ್ಪನ್ನಗಳಾಗಿವೆ. ಚೀನಾ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಉಯಿಘರ್ ಮುಸ್ಲಿಮರ ತಲೆಬೋಳಿಸಿ ಆ ಕೂದಲಿನಿಂದ ಈ ಉತ್ಪನ್ನಗಳನ್ನು ಉತ್ಪಾದಿಸಿ ಅಮೆರಿಕಗೆ ರಫ್ತು ಮಾಡ್ತಿದೆ ಅಂತ ಹೇಳಿದ್ದಾರೆ.

ಈ ಪ್ರದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಿಡಲಾಗಿದೆ ಅಂತ ವಿಶ್ವಸಂಸ್ಥೆ ಕೂಡ ಅಂದಾಜು ಮಾಡಿದೆ. ಇದ್ರ ಜೊತೆಗೆ ಈ ಪ್ರದೇಶದಲ್ಲಿ ಮುಸ್ಲಿಮರ ಜೊತೆ ಅಮಾನವೀಯ ಮತ್ತು ನರಸಂಹಾರದಂತಹ ಕೃತ್ಯಗಳನ್ನು ಎಸಗಲಾಗ್ತಿದೆ ಅಂತ ಸಾಮಾಜಿಕ ಹೋರಾಟಗಾರರು ವಾದಿಸುತ್ತಿದ್ದಾರೆ. ಆದ್ರೆ ಚೀನಾ ಮಾತ್ರ ಈ ಆರೋಪವನ್ನು ನಿರಾಕರಿಸಿಕೊಂಡೇ ಬಂದಿದೆ.

-masthmagaa.com

 

Contact Us for Advertisement

Leave a Reply