ಈ ಕಪ್ಪು ಬಣ್ಣದ ವಿಚಿತ್ರ ಜೀವಿ ಯಾವುದು..? ವಿಡಿಯೋ ನೋಡಿ ಹೇಳಿ…

masthmagaa.com:

ವಿಚಿತ್ರವಾದ ಕಪ್ಪು ಬಣ್ಣದ ಜೀವಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೆ ಕಪ್ಪು ಬಂಡೆಯ ಮೇಲೆ ದಪ್ಪ ದ್ರವ್ಯ ರಾಶಿಯಂತಿರುವ ಆ ಜೀವಿ ಯಾವುದು ಅಂತ ಚರ್ಚೆ ಶುರುವಾಗಿದೆ. ಕೆಲವರಂತೂ ಸ್ಪೈಡರ್ ಮ್ಯಾನ್-3 ಮತ್ತು ವೇನಮ್ ಸಿನಿಮಾದಲ್ಲಿ ತೋರಿಸಿರುವ ಅನ್ಯಗ್ರಹದ ಜೀವಿಗೆ ಹೋಲಿಕೆ ಮಾಡಿದ್ದಾರೆ. @sunnyarkade ಎಂಬ ಟ್ವಿಟ್ಟರ್ ಖಾತೆಯಲ್ಲಿ 14 ಸೆಕೆಂಡ್ ಇರುವ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಇದು ಏನು ಅಂತ ಯಾರಿಗಾದ್ರೂ ಗೊತ್ತಾ ಅಂತ ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು 19.5 ಮಿಲಿಯನ್ ಜನ ವೀಕ್ಷಿಸಿದ್ದು, ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply