masthmagaa.com:

ಕರ್ನಾಟಕದಲ್ಲಿ ಅದ್ರಲ್ಲೂ ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್​ ಮಾಫಿಯಾ ವಿಚಾರ ದೇಶಾದ್ಯಂತ ಸದ್ದು ಮಾಡ್ತಿದೆ. ಹಾಗಂತ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಕೇವಲ ಚಿತ್ರರಂಗಕ್ಕೆ ಸೀಮಿತವಾಗಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅದರ ಕಬಂಧಬಾಹು ಎಲ್ಲಾ ಕಡೆಯೂ ಚಾಚಿಕೊಂಡಿದೆ. ಇದರ ನಡುವೆಯೇ ‘ಕೆಲವೊಂದು ಹೈ ಪ್ರೊಫೈಲ್ ಶಾಲೆಗಳ ಹೊರಗಡೆಯೂ ಮಾದಕವಸ್ತುವಿನ ಜಾಲ ಕಾರ್ಯನಿರತವಾಗಿದೆ’ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ‘ಕೆಲವೊಂದು ಹೈ ಪ್ರೊಫೈಲ್ ಶಾಲೆಗಳ ಹೊರಗಡೆಯೂ ಡ್ರಗ್​ ಜಾಲ ಕಾರ್ಯನಿರತವಾಗಿದೆ ಅನ್ನೋ ಅನುಮಾನ ನಮಗೆ ಇದೆ. ಅಂತಹ ಕಡೆಗಳಲ್ಲಿ ಮಾದಕ ವಸ್ತು ಲೇಪಿತ ಐಸ್​ಕ್ರೀಂಗಳನ್ನು ನೀಡುವ ಮೂಲಕ ಮಕ್ಕಳಿಗೆ ಆಮಿಷವೊಡ್ಡಲಾಗುತ್ತಿದೆ. ಇದರಲ್ಲಿ ಭಾಗಿಯಾಗಿರುವವರನ್ನ ಜೈಲಿಗೆ ಅಟ್ಟಬೇಕು’ ಅಂತ ಸಚಿವರು ಹೇಳಿದ್ದಾರೆ.

https://twitter.com/ANI/status/1303227631588966400

-masthmagaa.com

Contact Us for Advertisement

Leave a Reply