ಭಾರತದ ‘ಆರೋಗ್ಯ ಸೇತು’ ಅಪ್ಲಿಕೇಶನ್​ಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ

masthmagaa.com:

ಕೊರೋನಾ ವಿರುದ್ಧದ ಹೋರಾಟದ ಭಾಗವಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ‘ಆರೋಗ್ಯ ಸೇತು’ ಅಪ್ಲಿಕೇಶನ್​ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟೆಡ್ರೊಸ್ ಅಧನಾಮ್ ಮಾತನಾಡಿ​, ‘ಭಾರತದ ಆರೋಗ್ಯ ಸೇತು ಅಪ್ಲಿಕೇಶನ್​ ಅನ್ನು 15 ಕೋಟಿ ಜನರು ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಇದರ ಸಹಾಯದಿಂದ ಎಲ್ಲೆಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದೆ ಅನ್ನೋದನ್ನು ತಿಳಿದುಕೊಳ್ಳಲು ಆರೋಗ್ಯ ಇಲಾಖೆಗೆ ನೆರವಾಗಿದೆ. ಜೊತೆಗೆ ಆ ಪ್ರದೇಶಗಳಲ್ಲಿ ಹೆಚ್ಚೆಚ್ಚು ಕೊರೋನಾ ಪರೀಕ್ಷೆಗಳನ್ನ ನಡೆಸಲು ಸಾಧ್ಯವಾಗಿದೆ’ ಅಂತ ಹೇಳಿದ್ದಾರೆ.

ಆರೋಗ್ಯ ಸೇತು ಒಂದು ಬ್ಲೂಟೂತ್ ಆಧಾರಿತ ಕೊರೋನಾ ಕಾಂಟ್ಯಾಕ್ಟ್​ ಟ್ರೇಸಿಂಗ್ ಅಪ್ಲಿಕೇಶನ್ ಆಗಿದೆ. ಇದರ ಸಹಾಯದಿಂದ ನಿಮ್ಮ ಸುತ್ತಮುತ್ತಲು ಎಷ್ಟು ಮಂದಿ ಕೊರೋನಾ ಸೋಂಕಿತರಿದ್ದಾರೆ ಅನ್ನೋದು ತಿಳಿಯುತ್ತದೆ. ಇದರ ಜೊತೆಗೆ ನೀವು ಎಷ್ಟು ಅಪಾಯದಲ್ಲಿದ್ದೀರಿ, ಆರೋಗ್ಯವಾಗಿರಲು ಏನು ಮಾಡಬೇಕು, ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು, ಕೊರೋನಾ ಅಂಕಿ ಅಂಶಗಳು, ಹೆಲ್ಪ್​ಲೈನ್ ನಂಬರ್​ಗಳು ಕೂಡ ಈ ಅಪ್ಲಿಕೇಶನ್​ನಲ್ಲಿ ಲಭ್ಯವಿದೆ. ಇದು ಒಟ್ಟು 12 ಭಾಷೆಗಳಲ್ಲಿವೆ.

-masthmagaa.com

Contact Us for Advertisement

Leave a Reply