ಕೊರೋನಾ ರಣಕೇಕೆ.. ಪಾತಾಳಕ್ಕೆ ಕುಸಿದ ಕಚ್ಚಾತೈಲ ಬೇಡಿಕೆ

masthmagaa.com:

ಕೊರೋನಾ ವೈರಸ್​ ಹರಡುವುದನ್ನ ತಡೆಗಟ್ಟಲು ದೇಶವ್ಯಾಪಿ ಲಾಕ್​ಡೌನ್ ಹೇರಲಾಗಿದೆ. ಅಗತ್ಯ ಸರಕು ಸೇವೆಗಳನ್ನ ಪೂರೈಸುವ ವಾಹನಗಳು ಹೊರತುಪಡಿಸಿ ಉಳಿದೆಲ್ಲಾ ವಾಹನಗಳಿಗೂ ಬ್ರೇಕ್ ಬಿದ್ದಿದೆ. ಹೀಗಾಗಿ ದೇಶದ ಕಚ್ಚಾತೈಲ ಬೇಡಿಕೆ ಶೇ. 70ರಷ್ಟು ಕಡಿಮೆಯಾಗಿದೆ ಅಂತ ದೇಶದ ದೊಡ್ಡ ತೈಲ ಸಂಸ್ಕರಣಾ ಘಟಕಗಳ ಅಧಿಕಾರಿಗಳು ತಿಳಿಸಿದ್ದಾರೆ. ಕಚ್ಚಾತೈಲ ಬೇಡಿಕೆ ಈ ಪ್ರಮಾಣದಲ್ಲಿ ಕುಸಿದಿರೋದು ನಾನು ಯಾವತ್ತೂ ನೋಡಿಲ್ಲ, ಕೇಳಿಲ್ಲ ಅಂತ ದೇಶದ ಅತಿದೊಡ್ಡ ತೈಲ ಉತ್ಪಾದನಾ ಸಂಸ್ಥೆ ಒಎನ್​ಜಿಸಿ ಮಾಜಿ ಮುಖ್ಯಸ್ಥ ಆರ್.ಎಸ್. ಶರ್ಮಾ ಹೇಳಿದ್ದಾರೆ.

ಜಾಗತಿಕ ತೈಲ ಬೇಡಿಕೆಯ ಪಟ್ಟಿಯಲ್ಲಿ ಅಮೆರಿಕ, ಚೀನಾ ಹಾಗೂ ಭಾರತ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಈ ಮೂರು ದೇಶಗಳೇ ಸುಮಾರು 40 ಪರ್ಸೆಂಟ್​ನಷ್ಟು​ ಜಾಗತಿಕ ತೈಲ ಬೇಡಿಕೆಯನ್ನ ಹೊಂದಿವೆ. ಆದ್ರೆ ಅಮೆರಿಕದಲ್ಲಿ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿರೋದ್ರಿಂದ ಲಾಕ್​ಡೌನ್ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿ ಮಾರ್ಚ್ 25ರಿಂದ ಲಾಕ್​ಡೌನ್ ಹೇರಲಾಗಿದೆ. ಹೀಗಾಗಿ ಈ ಎರಡು ದೇಶಗಳಲ್ಲಿ ತೈಲ ಬೇಡಿಕೆ ಪಾತಾಳಕ್ಕೆ ಕುಸಿದಿದೆ. ಆದ್ರೆ ಒಂದು ಸಮಾಧಾನದ ವಿಚಾರ ಅಂದ್ರೆ ಈ ಕಾಯಿಲೆ ಮೊದಲು ಕಾಣಿಸಿಕೊಂಡ ಚೀನಾ ದೇಶ ಲಾಕ್​ಡೌನ್​ನಿಂದ ನಿಧಾನವಾಗಿ ಹೊರಬರ್ತಿದೆ. ಇದರಿಂದ ಪಾತಾಳಕ್ಕೆ ಕುಸಿದ ತೈಲ ಬೇಡಿಕೆ ಸ್ವಲ್ಪ ಮಟ್ಟಿಗೆ ಸುಧಾರಿಸುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply