ಐಸಿಸಿ ಟೆಸ್ಟ್​​​ ಚಾಂಪಿಯನ್​​ಶಿಪ್​ ಗೆದ್ರೆ ಎಷ್ಟು ದುಡ್ಡು ಸಿಗುತ್ತೆ..?

masthmagaa.com:

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೀಯಲಿರೋ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಗೆದ್ದ ತಂಡವು 16 ಲಕ್ಷ ಅಮೆರಿಕನ್ ಡಾಲರ್ ಹಣ ಮತ್ತು ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಮೇಸ್ ಅನ್ನ ಪಡೆಯಲಿದೆ ಅಂತ ಐಸಿಸಿ ತಿಳಿಸಿದೆ. 16 ಲಕ್ಷ ಅಮೆರಿಕನ್ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 12 ಕೋಟಿ ಆಗುತ್ತೆ. ಸೋತ ತಂಡವು 8 ಲಕ್ಷ ಅಮೆರಿಕನ್ ಡಾಲರ್ ಹಣವನ್ನ ಪಡೆಯಲಿದೆ. ಒಂದ್ವೇಳೆ ಫೈನಲ್ ಮ್ಯಾಚ್ ಡ್ರಾ ಆದ್ರೆ ಮೊದಲ ಮತ್ತು ಎರಡನೇ ಸ್ಥಾನಗಳಿಗೆ ಬಹುಮಾನದ ಹಣವನ್ನ ವಿಭಜಿಸಲಾಗುತ್ತೆ ಮತ್ತು ಆ ತಂಡಗಳು ಚಾಂಪಿಯನ್‌ಗಳಾಗಿ ಉಳಿದಿರುವ ಸಮಯದಲ್ಲಿ ಮೇಸ್‌ನ ಸ್ವಾಧೀನವನ್ನು ಹಂಚಿಕೊಳ್ಳುತ್ತಾರೆ ಅಂತ ಐಸಿಸಿ ಹೇಳಿದೆ. ಅಂದ್ಹಾಗೆ ಕಳೆದ ಎರಡು ವರ್ಷಗಳಿಂದ 9 ತಂಡಗಳ ನಡುವೆ ಈ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್​​​ಶಿಪ್​​​​​ ನಡೀತಿದೆ. ಬ್ರಿಟನ್​​​ನ ಸೌತಾಂಪ್ಟನ್​​​ನಲ್ಲಿ ಜೂನ್ 18ರಿಂದ 22ರವರೆಗೆ ನಡೆಯಲಿದೆ.

-masthmagaa.com

Contact Us for Advertisement

Leave a Reply