ಕೊರೋನಾ ಬಗ್ಗೆ ಬಾಯಿ ಬಿಡದಂತೆ ಬೆದರಿಸಲಾಗಿತ್ತು: ಚೀನಾ ವೈದ್ಯೆ

masthmagaa.com:

ಚೀನಾ: ಕೊರೋನಾ ವೈರಸ್ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಆದ್ರೆ ಕೊರೋನಾ ವೈರಸ್ ವಿಚಾರದಲ್ಲಿ ಚೀನಾ ತೋರಿದ ಬೇಜವಾಬ್ದಾರಿತನದ ವಿಚಾರವೊಂದು ಈಗ ಬಯಲಾಗಿದೆ. ಅಸಲಿಗೆ ಡಿಸೆಂಬರ್ 15ರಂದು ಚೀನಾದ ವುಹಾನ್​ನಲ್ಲಿ ಈ ಸೋಂಕು ಶುರುವಾಯ್ತು ಎಂದು ಹೇಳಲಾಗುತ್ತೆ. ಆದ್ರೆ ಈ ಖಾಯಿಲೆ ಶುರುವಾದಾಗಲೇ ಇದು ಅತಿ ಭಯಂಕರ ವೈರಸ್, ಬೇರೆ ವೈರಸ್​​ಗಳಿಗಿಂತ ಭಿನ್ನವಾಗಿದ್ದು, ತುಂಬಾ ವೇಗವಾಗಿ ಹರಡುತ್ತೆ ಅನ್ನೋದನ್ನ ವೈದ್ಯರು ಕಂಡು ಹಿಡಿದಿದ್ದರು. ಆದ್ರೆ ಚೀನಾ ಸರ್ಕಾರ ಮತ್ತು ಅಧಿಕಾರಿಗಳು ವೈದ್ಯರು ಬಾಯಿ ಬಿಡದಂತೆ ನೋಡಿಕೊಂಡಿತು. ಒಂದ್ವೇಳೆ ಆಗಲೇ ವೈದ್ಯರ ಮಾತು ಕೇಳಿ ಎಚ್ಚೆತ್ತುಕೊಂಡಿದ್ದರೆ ಈ ಪ್ರಮಾಣದಲ್ಲಿ ವೈರಸ್ ಹರಡುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.

ಈ ವೈರಸ್​​ ಬಗ್ಗೆ ಮೊಟ್ಟ ಮೊದಲಿಗೆ ಎಚ್ಚರಿಸಿದ್ದ ಡಾಕ್ಟರ್ ವೆನ್​ಲಿಯಾಂಗ್ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ನಾಪತ್ತೆಯಾಗಿದ್ದಾರೆ. ಈ ನಡುವೆ ಕೊರೋನಾ ವೈರಸ್ ಬಗ್ಗೆ ಎಚ್ಚರಿಸಿದ್ದ ವೈದ್ಯರಲ್ಲಿ ಒಬ್ಬರಾದ ಡಾ.ಫೆನ್ ಚೀನಾದ ಬಗ್ಗೆ ಮಾತನಾಡಿದ್ದಾರೆ. ಕೊರೋನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡುವಾಗಲೇ ನನ್ನ ಹಲವಾರು ಸಹೋದ್ಯೋಗಿಗಳು ಸಾವನ್ನಪ್ಪಿದರು. ಆದ್ರೆ ನಾವು ಈ ಬಗ್ಗೆ ಡಿಸೆಂಬರ್ ತಿಂಗಳಲ್ಲೇ ಎಚ್ಚರಿಸಿದಾಗ ಅಧಿಕಾರಿಗಳು ನಮ್ಮ ಬಾಯಿ ಮುಚ್ಚಿಸಿದರು. ಅಲ್ಲದೆ ಈ ವೈರಸ್ ಬಗ್ಗೆ ಯಾರ ಬಳಿಯಾದರೂ ಹೇಳಿದರೆ ಪರಿಣಾಮ ಕೆಟ್ಟದಾಗಿರುತ್ತೆ ಅಂತ ಬೆದರಿಸಿದ್ದರು. ಆದ್ರೆ ಕೊರೋನಾ ಸೋಂಕು ಇಷ್ಟರ ಮಟ್ಟಿಗೆ ಕಾಡುತ್ತೆ ಅಂತ ಗೊತ್ತಿದ್ದರೆ ನಾನು ಮೊದಲೇ ಹೇಳುತ್ತಿದ್ದೆ. ಜೈಲಿಗೆ ಹಾಕಿದ್ದರೂ ಚಿಂತೆ ಇರಲಿಲ್ಲ ಅಂತ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಆದ್ರೆ ಈಗ ವೆಬ್​​ಸೈಟ್​​ನಲ್ಲಿ ನೀಡಲಾಗಿದ್ದ ಸಂದರ್ಶನವನ್ನು ತೆಗೆಯಲಾಗಿದೆ. ಆದ್ರೆ ಕೆಲವು ಚೀನೀಯರು ಇದರ ಸ್ಕ್ರೀನ್ ಶಾಟ್​ ತೆಗೆದುಕೊಂಡಿದ್ದಾರೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗ್ತಿದೆ.

-masthmagaa.com

Contact Us for Advertisement

Leave a Reply