ಕೋವಿಡ್​-19ಗೂ ನಮಗೂ ಯಾವುದೇ ಸಂಬಂಧವಿಲ್ಲ: ವುಹಾನ್ ಲ್ಯಾಬ್

masthmagaa.com:

ಕೊರೋನಾ ವೈರಸ್​ ಹುಟ್ಟಿ, ಇಡೀ ಜಗತ್ತಿಗೆ ಹರಡಿದ್ದು ಚೀನಾದಿಂದ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಈ ಡೆಡ್ಲಿ ವೈರಾಣುವನ್ನು ವುಹಾನ್​ ಲ್ಯಾಬ್​ನಲ್ಲಿ ಸೃಷ್ಟಿಸಿ ಸೋರಿಕೆ ಮಾಡಲಾಗಿದೆ ಅನ್ನೋ ಆರೋಪ ಚೀನಾ ಮೇಲಿದೆ. ಇದೇ ವಿಚಾರಕ್ಕೆ ಅಮೆರಿಕ-ಚೀನಾ ನಡುವಿನ ಸಂಬಂಧ ಮತ್ತಷ್ಟು ಹಾಳಾಗಿದೆ. ಆದ್ರೆ ಚೀನಾ ಮಾತ್ರ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದೆ.

ಇದರ ನಡುವೆಯೇ ಮಾತನಾಡಿರೋ ವುಹಾನ್​ನಲ್ಲಿರೋ ವೈರಾಲಜಿ ಲ್ಯಾಬ್​ನ ನಿರ್ದೇಶಕಿ ವಾಂಗ್​ ಯಾನ್​ಯಿ, ಈ ಪ್ರಯೋಗಾಲಯದಲ್ಲಿ ಬಾವಲಿ ಕೊರೋನಾ ವೈರಸ್​ನ 3 ಜೀವಂತ ಸ್ಟ್ರೈನ್​ ಬಗ್ಗೆ ಸಂಶೋಧನೆ ನಡೆಸುತ್ತಿದ್ದೆವು. ಆದ್ರೆ ಅದ್ರಲ್ಲಿ ಯಾವುದೂ ಕೂಡ ಕೋವಿಡ್-19ಗೆ ಕಾರಣವಾದ ಸ್ಟ್ರೈನ್​ಗೆ ಹೋಲಿಕೆಯಾಗುತ್ತಿರಲಿಲ್ಲ ಅಂತ ಹೇಳಿದ್ದಾರೆ. ಈ ಮೂಲಕ ವುಹಾನ್​ ಲ್ಯಾಬ್​ನಿಂದ ಕೊರೋನಾ ವೈರಸ್ ಹರಡಿದ್ದಲ್ಲ ಅಂತ ಹೇಳಿದ್ದಾರೆ.

ಪ್ರಯೋಗಾಲಯದಿಂದಲೇ ವೈರಾಣು ಸೋರಿಕೆಯಾಗಿದೆ ಅನ್ನೋ ಡೊನಾಲ್ಡ್​ ಟ್ರಂಪ್ ಹಾಗೂ ಇತರರು ಮಾಡುತ್ತಿರುವ ಆರೋಪಗಳು ‘ಶುದ್ಧ ಕಟ್ಟುಕಥೆ’. ನಮ್ಮ ಸಂಸ್ಥೆ ಕಳೆದ ಡಿಸೆಂಬರ್ 30ರಂದು ಅಪರಿಚಿತ ನ್ಯುಮೋನಿಯಾದ ಕ್ಲಿನಿಕಲ್ ಮಾದರಿಯೊಂದನ್ನು ಸ್ವೀಕರಿಸಿತ್ತು. ಅದಕ್ಕೂ ಮೊದಲು ನಮಗೆ ಯಾವುದೇ ಮಾಹಿತಿ ಇರಲಿಲ್ಲ ಅಥವಾ ಈ ವೈರಸ್​ ಅನ್ನು ನೋಡಿರಲಿಲ್ಲ.. ಸಂಶೋಧಿಸಿಲ್ಲ ಅಥವಾ ಇಟ್ಟುಕೊಂಡಿರಲಿಲ್ಲ. ವಾಸ್ತವದಲ್ಲಿ ವೈರಸ್​ ಇದೆ ಅನ್ನೋದು ಎಲ್ಲರಂತೆ ನಮಗೂ ತಿಳಿದಿರಲಿಲ್ಲ. ನಮ್ಮ ಬಳಿ ವೈರಾಣು ಇಲ್ಲದಿದ್ದಾಗ ಅದು ಸೋರಿಕೆಯಾಗಲು ಹೆಗೆ ಸಾಧ್ಯ? ಅಂತ ಹೇಳಿದ್ದಾರೆ.

-masthmagaa.com
Contact Us for Advertisement

Leave a Reply