masthmagaa.com:

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನ ಮರಳಿ ಪಡೆಯಲು ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಮುಂತಾದ ಪಕ್ಷಗಳು ರಚಿಸಿಕೊಂಡಿರುವ ‘ಗುಪ್ಕರ್’ ಮೈತ್ರಿಕೂಟಕ್ಕೆ ಕಾಂಗ್ರೆಸ್ ಬೆಂಬಲ ನೀಡ್ತಿರೋದಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್​ನ ಡಬಲ್ ಸ್ಟಾಂಡರ್ಡ್​ ಬಯಲಾಗಿದೆ. ಉಗ್ರವಾದ ಮತ್ತು ಪ್ರತ್ಯೇಕತಾವಾದದಲ್ಲಿ ಭಾಗಿಯಾಗಿರುವವರಿಗೆ ಕಾಂಗ್ರೆಸ್ ಬೆಂಬಲ ನೀಡುವ ಮೂಲಕ ದೇಶದ ಏಕತೆ ಮತ್ತು ಸಮಗ್ರತೆ ಜೊತೆಗೆ ಆಟವಾಡುತ್ತಿದೆ. ಒಂದು ಭಾರತ, ಶ್ರೇಷ್ಠ ಭಾರತ ಎಂಬ ಪರಿಕಲ್ಪನೆ ನಿಜವಾಗಲು ಕಾಂಗ್ರೆಸ್ ಬಿಡುತ್ತಿಲ್ಲ. ಕಾಂಗ್ರೆಸ್​ ಪಕ್ಷವು ದೆಹಲಿಯಲ್ಲಿ ಒಂದು ಮಾತಾಡಿದ್ರೆ ಮತ್ತು ಕಾಶ್ಮೀರದಲ್ಲಿ ಮತ್ತೊಂದು ಮಾಡ್ತಿದೆ ಅನ್ನೋದಕ್ಕೆ ಗುಪ್ಕರ್ ಸಭೆಗಳಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿರೋದೇ ಸಾಕ್ಷಿ. ಹೀಗಾಗಿ ಗುಪ್ಕರ್ ಮೈತ್ರಿಕೂಟದ ಬಗ್ಗೆ ತನ್ನ ನಿಲುವನ್ನ ಕಾಂಗ್ರೆಸ್ ಸ್ಪಷ್ಟಪಡಿಸಬೇಕು’ ಅಂತ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply