ಭಾರತಕ್ಕೂ ಕಾಲಿಟ್ಟ ಕರೆಂಟ್ ಕಟ್ ಪ್ರಾಬ್ಲಂ: ಮುಂದೇನು ಕಥೆ..?

masthmagaa.com:

ಭಾರತದಲ್ಲೂ ಕಲ್ಲಿದ್ದಲು ಕೊರತೆಯಿಂದಾಗಿ ಕರೆಂಟ್ ಸಮಸ್ಯೆ ಮಿತಿ ಮೀರ್ತಿದೆ. ಪಂಜಾಬ್, ದಿಲ್ಲಿ, ರಾಜಸ್ಥಾನ, ತಮಿಳುನಾಡು, ಜಾರ್ಖಂಡ್, ಬಿಹಾರ, ಆಂಧ್ರಪ್ರದೇಶಗಳಲ್ಲಿ ಲಾಂಗ್ ಪವರ್ ಕಟ್ ಶುರುವಾಗಿದೆ. ಪಂಜಾಬ್ ನಲ್ಲಿ ದಿನವೂ 4 ಗಂಟೆಗಳ ಪವರ್ ಕಟ್ ಆಗ್ತಿದೆ. ಚೆನ್ನೈನಲ್ಲಿ ಕೆಲ ಕಡೆ ಬೆಳಗ್ಗೆ 9ರಿಂದ ಸಂಜೆ 4ರ ವರೆಗೂ ಪವರ್ ಕಟ್ ಆಗಿದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಣತೂ, ‘ದಿಲ್ಲಿ ಶೀಘ್ರದಲ್ಲಿ ಕರೆಂಟ್ ಕ್ರೈಸಿಸ್ ಗೆ ಒಳಗಾಗಬಹುದು. ನಾನು ಖುದ್ದಾಗಿ ಈ ವಿಚಾರದ ಮೇಲೆ ನಿಗಾ ಇಟ್ಟಿದ್ದೀನಿ. ಪ್ರಧಾನಿ ಮೋದಿಗೂ ಲೆಟರ್ ಬರೆದು ಮಧ್ಯಪ್ರವೇಶಕ್ಕೆ ಆಗ್ರಹ ಮಾಡಿದ್ದೀನಿ’ ಅಂದಿದ್ದಾರೆ. ಪಕ್ಕದ ಆಂಧ‌್ರದಲ್ಲೂ ಪವರ್ ಕಟ್ ಸಮಸ್ಯೆಯಿಂದ ಕೈಗಾರಿಕೆ, ಕೃಷಿಗೆ ಅಡಚಣೆ ಶುರುವಾಗಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ಕೂಡ ಪ್ರಧಾನಿಗೆ ಪತ್ರ ಬರೆದಿದ್ದು, ಇಳುವರಿಯ ಕಡೇ ಹಂತದಲ್ಲಿ ನಮ್ಮಲ್ಲಿ ಕೃಷಿಗೆ ನೀರ್ ಜಾಸ್ತಿ ಬೇಕು. ಅದಕ್ಕೆ ಮೋಟರ್ಗಳು ಓಡಲು ಕರೆಂಟ್ ಬೇಕು. ಇಲ್ಲದೇ ಹೋದರೆ ರೈತರಿಗೆ ಭಾರೀ ಲಾಸ್ ಆಗುತ್ತೆ’ ಅಂದಿದ್ದಾರೆ. ಆದ್ರೆ ಕರ್ನಾಟಕದಲ್ಲಿ ಸದ್ಯಕ್ಕೆ ಕರೆಂಟ್ ಪೂರೈಕೆಯಲ್ಲಿ ವ್ಯತ್ಯಾಸವಾಗೋದಿಲ್ಲ ಅಂತ ಇಂಧನ ಸಚಿವ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಅಂದಹಾಗೆ ಇವತ್ತೇ ನಾವು ಸಹ ಪವರ್ ಕ್ರೈಸಿಸ್ ಶುರುವಾಗ್ತಿದೆ ಅಂತ, ಎಲ್ಲ ಮಾಹಿತಿ ಒಳಗೊಂಡ ವಿಶೇಷ ವರದಿಯನ್ನ ಪಬ್ಲಿಶ್ ಮಾಡಿದ್ದೇವೆ. ಕಲ್ಲಿದ್ದಲು ಕೊರತೆಯಿಂದಾಗಿ ಹೇಗೆ ದೇಶದಲ್ಲಿ ಉಷ್ಣ ವಿದ್ಯುತ್ ಉತ್ಪಾದನೆ ಕಮ್ಮಿಆಗಿ, ಮಹಾ ಗಂಡಾಂತರ ಶುರುವಾಗ್ತಿದೆ ಅಂತ ವಿವರಿಸಿದ್ದೀವಿ. ಫುಲ್ ನ್ಯೂಸ್ ಬಳಿಕ ದಯವಿಟ್ಟು ಅದನ್ನೂ ನೋಡಿ.

 

– masthmagaa.com

Contact Us for Advertisement

Leave a Reply