ದೇಶದ ಜನರಿಗೆ ಸಿಹಿಸುದ್ದಿ..! 300 ಜಿಲ್ಲೆಗಳು ಕೊರೋನಾ ಮುಕ್ತ..!

masthmagaa.com:

ದೆಹಲಿ: ಕೊರೋನಾ ಆತಂಕದಲ್ಲಿರೋ ಭಾರತೀಯರಿಗೆ ಒಂದು ನೆಮ್ಮದಿಯ ಸುದ್ದಿ ಇದೆ. ಅದೇನಂದ್ರೆ ದೇಶದ 300 ಜಿಲ್ಲೆಗಳು ಕೊರೋನಾದಿಂದ ಮುಕ್ತವಾಗಿವೆ ಅಂತ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಜೊತೆಗೆ 300 ಜಿಲ್ಲೆಗಳಲ್ಲಿ ಕಡಿಮೆ ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 129 ಜಿಲ್ಲೆಗಳು ಹಾಟ್​​ಸ್ಪಾಟ್​​ಗಳಾಗಿವೆ ಅಂತ ಮಾಹಿತಿ ನೀಡಿದ್ದಾರೆ.

ಹಾಟ್​ಸ್ಪಾಟ್​​ಗಳಲ್ಲಿ ಕೊರೋನಾ ಹರಡುವಿಕೆ ತಡೆಯಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಇನ್ನು 80 ಜಿಲ್ಲೆಗಳಲ್ಲಿ ಕಳೆದ 7 ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಅದೇ ರೀತಿ 47 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.. 39 ಜಿಲ್ಲೆಗಳಲ್ಲಿ ಕಳೆದ 21 ದಿನಗಳಿಂದ ಹೊಸ ಸೋಂಕಿತರು ಪತ್ತೆಯಾಗಿಲ್ಲ.. ಇನ್ನು 17 ಜಿಲ್ಲೆಗಳಲ್ಲಿ 28 ದಿನಗಳಿಂದ ಹೊಸ ಸೋಂಕಿತರು ಪತ್ತೆಯಾಗಿಲ್ಲ ಅಂತ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply