ರಾಜ್ಯದಲ್ಲಿ ಕೊರೋನಾ ಮಹಾಸ್ಫೋಟ.. ಮತ್ತೆ 53 ಮಂದಿಗೆ ಅಂಟಿದ ಕಾಯಿಲೆ..!

masthmagaa.com:

ರಾಜ್ಯದಲ್ಲಿ ಮತ್ತೊಮ್ಮೆ ಕೊರೋನಾ ಸ್ಫೋಟವಾಗಿದ್ದು ನಿನ್ನೆ ಸಂಜೆಯಿಂದ ಇವತ್ತು ಮಧ್ಯಾಹ್ನ 12 ಗಂಟೆವರೆಗೆ ಹೊಸದಾಗಿ 53 ಜನರಲ್ಲಿ ಸೋಂಕು ದೃಢಪಟ್ಟಿದೆ. ಒಂದೇ ದಿನ ಇಷ್ಟು ಜನರಿಗೆ ಕೊರೋನಾ ವೈರಸ್ ತಗುಲಿರೋದು ಇದೇ ಮೊದಲು.

ಆಘಾತಕಾರಿ ಅಂದ್ರೆ ಬೆಳಗಾವಿ ಒಂದರಲ್ಲೇ ಬರೋಬ್ಬರಿ 22 ಜನರಿಗೆ ಕಾಯಿಲೆ ತಗುಲಿದೆ. 22ಕ್ಕೆ 22 ಜನ ಕೂಡ ರಾಜಸ್ಥಾನದ ಅಜ್ಮೀರ್​ಗೆ ಹೋಗಿ ಬಂದವರಾಗಿದ್ದಾರೆ.

ಬಾಗಲಕೋಟೆಯಲ್ಲಿ 8 ಜನರಿಗೆ ಸೋಂಕು ತಗುಲಿದ್ದು, ಇವರೂ ಕೂಡ ರಾಜಸ್ಥಾನದ ಅಜ್ಮೀರ್​ಗೆ ಹೋಗಿ ಬಂದವರಾಗಿದ್ದಾರೆ.

ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದ್ದು, 8 ಜನರಿಗೆ ಕಾಯಿಲೆ ಹರಡಿದೆ. ಇದರಲ್ಲಿ ಶಿಕಾರಿಪುರದ  7 ಹಾಗೂ ತೀರ್ಥಹಳ್ಳಿಯ ಇಬ್ಬರು ಇದ್ದಾರೆ. ಇವರೆಲ್ಲರೂ ಗುಜರಾತ್​ನ ಅಹಮದಾಬಾದ್​ನಿಂದ ಬಂದವರಾಗಿದ್ದಾರೆ.

ಉತ್ತರಕನ್ನಡದ ಭಟ್ಕಳದಲ್ಲಿ 7 ಜನರಿಗೆ ವೈರಾಣು ಹರಡಿದ್ದು, ಎಲ್ಲರೂ ರೋಗಿ ನಂಬರ್ 659ರ ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ.

ಉಳಿದಂತೆ ಬೆಂಗಳೂರು ನಗರ 3, ಕಲಬುರಗಿ 3, ಚಿಕ್ಕಬಳ್ಳಾಪುರ 1 ಹಾಗೂ ದಾವಣಗೆರೆಯಲ್ಲಿ 1 ಪ್ರಕರಣ ದೃಢಪಟ್ಟಿದೆ.

ಬೆಂಗಳೂರು ನಗರದಲ್ಲಿ ಮೇ 7ರಂದು ಮೃತಪಟ್ಟಿದ್ದ 56 ವರ್ಷದ ಮಹಿಳೆಗೆ (ರೋಗಿ ನಂಬರ್ 846) ಕೊರೋನಾ ಸೋಂಕು ತಗುಲಿತ್ತು ಅನ್ನೋದು ಈಗ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಇದುವರೆಗೆ 405 ಮಂದಿ ಗುಣಮುಖರಾಗಿದ್ದಾರೆ.

ಇವತ್ತು ಪತ್ತೆಯಾದ 53 ಪ್ರಕರಣಗಳಲ್ಲಿ 30 ಪ್ರಕರಣಗಳು ರಾಜಸ್ಥಾನದ ಅಜ್ಮೀರ್ ಲಿಂಕ್​ ಹೊಂದಿದೆ. 8 ಪ್ರಕರಣಗಳು ಗುಜರಾತ್​ನ ಅಹಮದಾಬಾದ್​ ಲಿಂಕ್ ಹೊಂದಿದೆ.

-masthmagaa.com

Contact Us for Advertisement

Leave a Reply