masthmagaa.com:

ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್ ಭಾರತದಲ್ಲೂ ತನ್ನ ಪ್ರಹಾರವನ್ನು ನಡೆಸುತ್ತಿದೆ. ಆದ್ರೆ ಕಳೆದ 24 ಗಂಟೆಗಳಲ್ಲಿ 55,342 ಪ್ರಕರಣ ದಾಖಲಾಗುವ ಮೂಲಕ ದೇಶದಲ್ಲಿ ಕೊರೊನಾ ಹಾವಳಿ ಕಡಿಮೆಯಾಗುತ್ತಿರುವ ಲಕ್ಷಣ ಕಾಣುತ್ತಿದೆ. ಆಗಸ್ಟ್​ 18ರ (55,079) ಬಳಿಕ ಒಂದು ದಿನದಲ್ಲಿ 55,000 ಪ್ರಕರಣ ದೃಢಪಟ್ಟಿರೋದು ಇದೇ ಮೊದಲು. ಸೆಪ್ಟೆಂಬರ್​ನಲ್ಲಿ ದಿನವೊಂದಕ್ಕೆ 90 ಸಾವಿರದಷ್ಟು  ಪ್ರಕರಣ ವರದಿಯಾಗ್ತಿತ್ತು. ಆದ್ರೆ ಮೊನ್ನೆ 74,000.. ನಿನ್ನೆ 66,000.. ಇವತ್ತು 55,000 ಪ್ರಕರಣ ದೃಢಪಟ್ಟಿದೆ. ಕಳೆದ ಮೂರ್ನಾಲ್ಕು ದಿನಗಳ ಟ್ರೆಂಡ್​ ನೋಡ್ತಿದ್ರೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಅನ್ನೋದು ಗೊತ್ತಾಗುತ್ತದೆ.

ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 71.75 ಲಕ್ಷ ದಾಟಿದೆ. ಕಳೆದ 24 ಗಂಟೆಗಳಲ್ಲಿ 706 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1.09 ಲಕ್ಷ ದಾಟಿದೆ. ಕಳೆದ 24 ಗಂಟೆಗಳಲ್ಲಿ 77,760 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 62.27 ಲಕ್ಷ ದಾಟಿದೆ. ದೇಶದಲ್ಲಿ ಇನ್ನೂ ಕೂಡ 8.38 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಗುಣಮುಖ ಪ್ರಮಾಣ 86.78% ಇದ್ದು, ಸಾವಿನ ಪ್ರಮಾಣ 1.53%ಗೆ ಇಳಿಕೆಯಾಗಿದೆ. ಅಕ್ಟೋಬರ್ 12ರಂದು 10.73 ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದೆ. ಈ ಮೂಲಕ ದೇಶದಲ್ಲಿ ಇದುವರೆಗೆ ನಡೆಸಿದ ಕೊರೋನಾ ಪರೀಕ್ಷೆಗಳ ಸಂಖ್ಯೆ 8.89 ಕೋಟಿ ಆಗಿದೆ.

-masthmagaa.com

Contact Us for Advertisement

Leave a Reply