ದೇಶದಲ್ಲಿ ಒಂದೇ ದಿನ 67,000+ ಜನರಿಗೆ ಸೋಂಕು.. ಕರ್ನಾಟಕ ಸೇರಿ 10 ರಾಜ್ಯಗಳು ತತ್ತರ

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 67,151 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು 1,059 ಸೋಂಕಿತರು ಮೃತಪಟ್ಟಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 32.34 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 59,449 ಆಗಿದೆ. 

ಕಳೆದ 24 ಗಂಟೆಗಳಲ್ಲಿ 63,000+ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 24.67 ಲಕ್ಷ ದಾಟಿದ್ದು, 7.07 ಲಕ್ಷ ಸೋಂಕಿತರು ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 76.30% ಇದ್ದು, ಸಾವಿನ ಪ್ರಮಾಣ 1.84% ಇದೆ. ಆಗಸ್ಟ್​ 24ರಂದು ದೇಶದಲ್ಲಿ 8.23 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ 3.76 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ತಿಳಿಸಿದೆ.

ಸತತ 22ನೇ ದಿನ ಭಾರತದಲ್ಲಿ ಅಮೆರಿಕ ಮತ್ತು ಬ್ರೆಜಿಲ್​ಗಿಂತ ಹೆಚ್ಚು ಕೊರೋನಾ ಪ್ರಕರಣ ದೃಢಪಟ್ಟಿದೆ. ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ 38,000ಕ್ಕೂ ಹೆಚ್ಚು ಮತ್ತು ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್​ನಲ್ಲಿ 47,000ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿದೆ. ಭಾರತದಲ್ಲಿ 67,000ಕ್ಕೂ ಹೆಚ್ಚು.

ರಾಜ್ಯವಾರು ಸಕ್ರಿಯ ಪ್ರಕರಣ (ಟಾಪ್-10):

1. ಮಹಾರಾಷ್ಟ್ರ: 1.66 ಲಕ್ಷ ಪ್ರಕರಣ (22,700+ ಸಾವು)

2. ಆಂಧ್ರಪ್ರದೇಶ: 89,000+ ಪ್ರಕರಣ (3,400+ ಸಾವು)

3. ಕರ್ನಾಟಕ: 82,000+ ಪ್ರಕರಣ (4,900+ ಸಾವು)

4. ತಮಿಳುನಾಡು: 52,000+ ಪ್ರಕರಣ (6,700+ ಸಾವು)

5. ಉತ್ತರಪ್ರದೇಶ: 49,000+ ಪ್ರಕರಣ (3,000+ ಸಾವು)

6. ಪಶ್ಚಿಮ ಬಂಗಾಳ: 27,000+ ಪ್ರಕರಣ (2,900+ ಸಾವು)

7. ತೆಲಂಗಾಣ: 25,000+ ಪ್ರಕರಣ (780 ಸಾವು)

8. ಒಡಿಶಾ: 24,000+ ಪ್ರಕರಣ (428 ಸಾವು)

9. ಕೇರಳ: 21,000+ ಪ್ರಕರಣ (244 ಸಾವು)

10. ಬಿಹಾರ: 19,000+ ಪ್ರಕರಣ (519 ಸಾವು)

-masthmagaa.com

Contact Us for Advertisement

Leave a Reply