masthmagaa.com:

ದೆಹಲಿ: ಭಾರತದಲ್ಲಿ ಕೊರೋನಾ ದಿನಕ್ಕೊಂದು ಹೊಸ ದಾಖಲೆ ಬರೆಯುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 90,632  ಮಂದಿಗೆ ಸೋಂಕು ತಗುಲಿದೆ. ಇದು ಕೇವಲ ಭಾರತ ಮಾತ್ರವಲ್ಲ.. ಇಡೀ ವಿಶ್ವದಲ್ಲೇ ದೇಶವೊಂದರಲ್ಲಿ ಒಂದು ದಿನಕ್ಕೆ ಇಷ್ಟು ಮಂದಿಗೆ ಸೋಂಕು ತಗುಲಿರೋದು ಇದೇ ಮೊದಲು. ಈ ಮೂಲಕ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 41,13,811ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 1,065 ಮಂದಿ ಸಾವನ್ನಪ್ಪಿದ್ದು, 70,626 ಮಂದಿ ಮೃತಪಟ್ಟಂತಾಗಿದೆ. ನಿನ್ನೆ 73,642 ಮಂದಿ ಗುಣಮುಖರಾಗಿದ್ದು, ಒಟ್ಟು 31,80,865 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.  ಇನ್ನೂ ಕೂಡ 8,62,320 ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ದೇಶದಲ್ಲಿ ಗುಣಮುಖ ಪ್ರಮಾಣ ಶೇ.77.32ರಷ್ಟಿದ್ದು, ಸಾವಿನ ಪ್ರಮಾಣ ಶೇ.1.72ರಷ್ಟಿದೆ.

-masthmagaa.com

Contact Us for Advertisement

Leave a Reply