masthmagaa.com:
ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕೋ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಮತ್ತೊಂದು ಕಾಂಟ್ರೊವರ್ಸಿ ಮೈಮೇಲೆ ಎಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಬಾಲಕನಿಗೆ ಕಂಗನಾ ಕೊಟ್ಟ ಲಿಪ್ ಕಿಸ್.. ಕಂಗನಾ ತನ್ನ ಸಹೋದರನ ಮದುವೆ ಸಮಯದಲ್ಲಿ ಬಾಲಕನಿಗೆ ಲಿಪ್ ಕಿಸ್ ಕೊಟ್ಟ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ʻನಾನು ಶೂಟಿಂಗ್ಗೆ ಹೊರಟು ನಿಂತಾಗ ಈತ ಹೋಗ್ಬೇಡ ಅಂದ. ನಂಗೆ ಕೆಲಸ ಇದೆ ಅಂತ ಹೇಳ್ದಾಗ ಸೀದಾ ಕಾಲ್ ಮೇಲೆ ಕೂತ್ಕೊಂಡು, ಹಾಗಾದ್ರೆ ಎರಡು ನಿಮಿಷ ನನ್ ಜೊತೆ ಕೂತ್ಕೋ ಅಂತ ಹೇಳಿರೋ ಅವನ ನಗುಮುಖ ಈಗಲೂ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವಂತೆ ಮಾಡುತ್ತೆʼ ಅಂತ ಎಮೋಶನಲ್ ಆಗಿ ಬರೆದು ಫೋಟೋ ಪೋಸ್ಟ್ ಮಾಡಿದ್ದಾರೆ. ಅಂದ್ಹಾಗೆ ಈ ಬಾಲಕ ಬೇರಾರೂ ಅಲ್ಲ ಕಂಗನಾಳ ಸೋದರಳಿಯ. ಆದ್ರೂ ಈ ಫೋಟೋ ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅದ್ಕೆ ಕಾರಣ ಕಂಗನಾ ಕಿಸ್ ಕೊಟ್ಟ ಜಾಗ.. ʻಮಕ್ಳು ಅಂದ್ರೆ ಸಾಮಾನ್ಯವಾಗಿ ಕೆನ್ನೆಗೆ ಅಥವಾ ಹಣೆಗೆ ಕಿಸ್ ಕೊಡ್ತಾರೆ. ಲಿಪ್ಗೆ ಕೊಡೋದು ನಮ್ಮ ಸಂಸ್ಕೃತಿ ಅಲ್ಲʼ ಅಂತ ಕಂಗನಾಳನ್ನ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
When we left for the shoot, he said don’t go, I insisted I need to work, he looked thoughtful and immediately sat in my lap and said smilingly….ok you go but let me sit with you for two mins…. still get tears thinking about his face ❤️ pic.twitter.com/avGiwoLXLG
— Kangana Ranaut (@KanganaTeam) November 22, 2020
-masthmagaa.com
Contact Us for Advertisement