‘ಐಶ್ವರ್ಯಾ ರೈಗೆ ಕೊರೋನಾ’.. ಗೊಂದಲಕ್ಕೆ ಕಾರಣವಾಯ್ತು ಮಹಾರಾಷ್ಟ್ರ ಸಚಿವರ ಟ್ವೀಟ್

masthmagaa.com:

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್​ (77 ವರ್ಷ) ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್​ಗೆ (44 ವರ್ಷ) ಕೊರೋನಾ ದೃಢಪಟ್ಟ ಬೆನ್ನಲ್ಲೇ ಅಭಿಷೇಕ್ ಬಚ್ಚನ್ ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ (46 ವರ್ಷ) ಮತ್ತು ಪುತ್ರಿ ಆರಾಧ್ಯಗೂ (8 ವರ್ಷ) ಕೊರೋನಾ ಸೋಂಕು ದೃಢಪಟ್ಟಿದೆ ಅಂತ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಟ್ವೀಟ್ ಮಾಡಿದ್ದಾರೆ. ಅಮಿತಾಬ್ ಬಚ್ಚನ್​​ ಅವರ ಪತ್ನಿ ಜಯಾ ಬಚ್ಚನ್​ಗೆ ಕೊರೋನಾ ನೆಗೆಟಿವ್ ಬಂದಿದೆ ಎಂದಿದ್ದಾರೆ. ಆದ್ರೆ ಕೆಲವೇ ಕ್ಷಣಗಳಲ್ಲಿ ಸಚಿವ ರಾಜೇಶ್ ಟೋಪೆ ಆ ಟ್ವೀಟ್​ ಅನ್ನು ಡಿಲೀಟ್ ಮಾಡಿದ್ದಾರೆ. ಇದೇ ಈಗ ಸಾಕಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಸಚಿವರು ಟ್ವೀಟ್ ಡಿಲೀಟ್ ಮಾಡಿರೋದು ನೋಡಿದ್ರೆ ಎರಡು ಸಾಧ್ಯತೆಗಳು ಇರಬಹುದು. ಮೊದಲನೇದು, ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯಳ ಕೊವಿಡ್-19 ಪರಿಕ್ಷಾ ವರದಿ ತಪ್ಪಿರಬಹುದು ಅಥವಾ ವರದಿಯಲ್ಲಿ ಏನಾದ್ರೂ ಗೊಂದಲ ಇರಬಹುದು. ಎರಡನೇ ಸಾಧ್ಯತೆ, ಕೊರೋನಾ ಸೋಂಕಿತರ ಹೆಸರು ಮತ್ತು ಗುರುತನ್ನು ಬಹಿರಂಗ ಪಡಿಸುವಂತಿಲ್ಲ ಅಂತ ನಿಯಮ ಇದೆ. ನಿಯಮ ಉಲ್ಲಂಘಿಸಿ ವಿವಾದ ಮೈಮೇಲೆ ಎಳೆದುಕೊಳ್ಳೋದು ಬೇಡ ಅನ್ನೋ ಕಾರಣಕ್ಕೆ ಟ್ವೀಟ್ ಡಿಲೀಟ್ ಮಾಡಿರಬಹುದು.

-masthmagaa.com

Contact Us for Advertisement

Leave a Reply