‘ಅವನು ಕಣ್ಣು ಕಾಣದ ಹಂದಿ’ ಅಂತ ನಟಿ ಸಂಜನಾ ಗಲ್ರಾನಿ ಸಿಟ್ಟಾಗಿದ್ದೇಕೆ..?

masthmagaa.com:

‘ಪ್ರಶಾಂತ್ ಸಂಬರಗಿಗೆ ನನ್ನ ಹೆಸರು ತೆಗೆದುಕೊಳ್ಳುವ ಯೋಗ್ಯತೆ ಇಲ್ಲ. ನನ್ನ ಹೆಸರು ತೆಗೆದುಕೊಳ್ಳುವ ಧಮ್ ಕೂಡ ಇಲ್ಲ. ಅವನು ಒಬ್ಬ ಹಂದಿ. ಖಂಡಿತವಾಗಿಯೂ ಹಂದಿ. ನಾನು ಒಂದೇ ಸಿನಿಮಾ ಮಾಡಿದ್ದೇನೆ ಅಂತ ಹೇಳುತ್ತಾನೆ. ನಾನು ಮಾಡಿದ 50 ಸಿನಿಮಾಗಳು ಅವನ ಕಣ್ಣಿಗೆ ಕಾಣಿಸಿಲ್ಲ ಅಂದ್ರೆ ಆತ ಖಂಡಿತವಾಗಿಯೂ ಹಂದಿನೇ. ಅಂತಹ ಕಣ್ಣು ಕಾಣದ ಹಂದಿ ಬಗ್ಗೆ ನಾವ್ಯಾಕೆ ಗಮನ ಕೊಡಬೇಕು’ ಅಂತ ಸಂಜನಾ ಗಲ್ರಾನಿ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಪ್ರಶಾಂತ್ ಸಂಬರಗಿ, ‘ಗಂಡ ಹೆಂಡತಿ’ ಚಿತ್ರದ ನಾಯಕಿ ಸಂಜನಾ ಬಗ್ಗೆ ಸಿನಿಮಾ ಇಂಡಸ್ಟ್ರಿಗೆ ಗೊತ್ತು. ಆಕೆಯ ಬಗ್ಗೆ ಮಾತನಾಡಿ ನಾನು ಬಾಯಿ ಗಲೀಜು ಮಾಡಿಕೊಳ್ಳುವುದಿಲ್ಲ ಅಂತಾನೂ ಹೇಳಿದ್ದರು. ಇದೀಗ ಅದಕ್ಕೆ ಪ್ರತಿಕ್ರಿಯಿಸಿರುವ ಸಂಜನಾ ಗಲ್ರಾನಿ ‘ಅವನು ಕಣ್ಣು ಕಾಣದ ಹಂದಿ’ ಅಂತ ಕೆಂಡಾಮಂಡಲರಾಗಿದ್ದಾರೆ.

ಅಂದ್ಹಾಗೆ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜನಾ ಗಲ್ರಾನಿ ಅವರ ಸ್ನೇಹಿತ ರಾಹುಲ್ ಈಗಾಗಲೇ ಸಿಸಿಬಿ ವಿಚಾರಣೆಗೆ ಒಳಪಟ್ಟಿದ್ದಾರೆ. ಶರ್ಮಿಳಾ ಮಾಂಡ್ರೆ ಅವರ ಗೆಳೆಯ ಕಾರ್ತಿಕ್​ನನ್ನು ಕೂಡ ವಿಚಾರಣೆ ನಡೆಸಲಾಗಿದೆ. ನಟಿ ರಾಗಿಣಿ ದ್ವಿವೇದಿ ಮತ್ತು ಅವರ ಆಪ್ತ ರವಿಶಂಕರ್​ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply