ಐಶ್ವರ್ಯಾ ರೈ ಬಚ್ಚನ್​ ಮತ್ತು ಪುತ್ರಿ ಆರಾಧ್ಯಗೂ ಕೊರೋನಾ ದೃಢ..!

masthmagaa.com:

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್​ (77 ವರ್ಷ) ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್​ಗೆ (44 ವರ್ಷ) ಕೊರೋನಾ ದೃಢಪಟ್ಟ ಬೆನ್ನಲ್ಲೇ ಇದೀಗ  ಅಭಿಷೇಕ್ ಬಚ್ಚನ್ ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ (46 ವರ್ಷ) ಮತ್ತು ಪುತ್ರಿ ಆರಾಧ್ಯಗೂ (8 ವರ್ಷ) ಕೊರೋನಾ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಟ್ವೀಟ್ ಮಾಡಿ ಹೇಳಿದ್ದಾರೆ. ಅದೃಷ್ಟವಶಾತ್ ಅಮಿತಾಬ್​ ಅವರ ಪತ್ನಿ ಜಯಾ ಬಚ್ಚನ್​ಗೆ ಕೊರೋನಾ ನೆಗೆಟಿವ್ ಬಂದಿದೆ.

ಸದ್ಯ ಐಶ್ವರ್ಯಾ ರೈ ಬಚ್ಚನ್ ಮತ್ತು ಆರಾಧ್ಯ ಆಸ್ಪತ್ರೆಯಲ್ಲಿದ್ದಾರೋ ಅಥವಾ ಮನೆಯಲ್ಲಿದ್ದಾರೋ ಅನ್ನೋದು ಗೊತ್ತಾಗಿಲ್ಲ. ಒಂದುವೇಳೆ ಅವರು ಮನೆಯಲ್ಲಿದ್ದರೆ ಶೀಘ್ರದಲ್ಲೇ ಆಸ್ಪತ್ರೆಗೆ ದಾಖಲಿಸಲಾಗುತ್ತೆ. ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ದಾಖಲಾಗಿರೋ ಮುಂಬೈನ ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲೇ ಐಶ್ವರ್ಯಾ ರೈ ಮತ್ತು ಆರಾಧ್ಯಗೆ ಚಿಕಿತ್ಸೆ ನೀಡುವ ಸಾಧ್ಯತೆ ಇದೆ.

ಮತ್ತೊಂದುಕಡೆ ಮುಂಬೈನ ಜಲ್ಸಾ ನಿವಾಸವನ್ನು ಕಂಟೈನ್​ಮೆಂಟ್ ಜೋನ್ ಅಂತ ಘೋಷಣೆ ಮಾಡಲಾಗಿದ್ದು, ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಜಯಾ ಬಚ್ಚನ್​ ಅವರು 14 ದಿನಗಳ ಕಾಲ ಹೋಂ ಐಸೋಲೇಷನ್​ನಲ್ಲಿ ಇರಬೇಕಾಗುತ್ತದೆ.

-masthmagaa.com

Contact Us for Advertisement

Leave a Reply