masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ. ಬೈಡೆನ್ ಗೆದ್ದಾಯ್ತು, ಅವರೇ ಅಮೆರಿಕದ ಮುಂದಿನ ಅಧ್ಯಕ್ಷರು ಅಂತ ನಾವೆಲ್ಲರೂ ಅಂದುಕೊಂಡಿದ್ದೀವಿ. ಆದ್ರೆ ಸೋಲು ಒಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ‘ನಮಗೆ ದೊಡ್ಡ ಪ್ರಗತಿ ಸಿಗುತ್ತಿದೆ. ಅದರ ಫಲಿತಾಂಶ ಮುಂದಿನ ವಾರದಿಂದ ಬರಲು ಶುರುವಾಗುತ್ತೆ. ಮೇಕ್ ಅಮೆರಿಕ ಗ್ರೇಟ್ ಅಗೈನ್. ವಿ ವಿಲ್ ವಿನ್’ ಅಂತ ಟ್ವೀಟ್ ಮಾಡಿದ್ದಾರೆ.

ಅಂದ್ಹಾಗೆ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಅಂತ ಡೊನಾಲ್ಡ್​ ಟ್ರಂಪ್ ಕಾನೂನು ಹೋರಾಟ ಮಾಡುತ್ತಿದ್ದಾರೆ. ಇದೀಗ ಅದರ ತನಿಖೆ ನಡೆಸಲು ಅಮೆರಿಕದ ಅಟಾರ್ನಿ ಜನರಲ್ ವಿಲಿಯಂ ಬಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಟ್ರಂಪ್​ಗೆ ಸಿಕ್ಕ ದೊಡ್ಡ ಗೆಲುವಾಗಿದೆ. ಯಾಕಂದ್ರೆ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಅನ್ನೋದಕ್ಕೆ ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣ ಕಾನೂನು ಹೋರಾಟದಲ್ಲಿ ಟ್ರಂಪ್​ಗೆ ಹಿನ್ನಡೆಯಾಗಿತ್ತು. ಇದೀಗ ಚುನಾವಣೆಯ ಫಲಿತಾಂಶ ಪ್ರಕಟಿಸುವ ಮುನ್ನ ತನಿಖೆ ನಡೆಸಬೇಕು ಅಂತ ಅಟಾರ್ನಿ ಜನರಲ್ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply