masthmagaa.com:

AIMIM ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಚಾಲೆಂಜ್ ಹಾಕಿದ್ದಾರೆ. ಅದು ಹೈದ್ರಾಬಾದ್​ ಮಹಾ ನಗರ ಪಾಲಿಕೆ (GHMC) ಚುನಾವಣೆಗೆ ಸಂಬಂಧಿಸಿದಂತೆ. ಹೌದು, ‘ಡಿಸೆಂಬರ್ 1ರಂದು ನಡೆಯಲಿರುವ ಹೈದ್ರಾಬಾದ್ ಪಾಲಿಕೆ ಚುನಾವಣಾ ಪ್ರಚಾರಕ್ಕೆ ಬಿಜೆಪಿಯವರು ಬೇಕಿದ್ರೆ ಪ್ರಾಧನಿ ಮೋದಿಯನ್ನೇ ಕರೆಸಲಿ. ನೋಡೋಣ ಎಷ್ಟು ಸೀಟು ಗೆಲ್ತಾರೆ’ ಅಂತ ಓವೈಸಿ ಚಾಲೆಂಜ್ ಹಾಕಿದ್ಧಾರೆ. ಅಂದ್ಹಾಗೆ ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ರಾಷ್ಟ್ರ ನಾಯಕರನ್ನೇ ಪ್ರಚಾರಕ್ಕೆ ಕಳಿಸಿದೆ. ಇದರ ಬೆನ್ನಲ್ಲೇ ಓವೈಸಿ ಈ ರೀತಿ ಹೇಳಿದ್ಧಾರೆ. ಇತ್ತೀಚೆಗಷ್ಟೇ ‘ಬಿಜೆಪಿ ಕಡೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೂಡ ಪ್ರಚಾರಕ್ಕೆ ಬರಬಹುದು’ ಅಂತ ಟಿಆರ್​ಎಸ್​ ಲೇವಡಿ ಮಾಡಿತ್ತು. ಇದೀಗ ಓವೈಸಿ ಪ್ರಧಾನಿ ಮೋದಿಗೆ ಚಾಲೆಂಜ್ ಹಾಕಿದ್ದಾರೆ. ಇದೆಲ್ಲದರ ನಡುವೆ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಾಳೆ ಹೈದ್ರಾಬಾದ್​ನಲ್ಲಿ ರೋಡ್​ ಶೋ ನಡೆಸಲಿದ್ದಾರೆ ಅನ್ನೋದು ಗೊತ್ತಾಗಿದೆ. ಒಂದು ಪಾಲಿಕೆ ಚುನಾವಣೆಯನ್ನ ಬಿಜೆಪಿ ಈ ಪರಿ ಗಂಭೀರವಾಗಿ ತೆಗೆದುಕೊಂಡಿರೋದು ಇದೇ ಮೊದಲು ಅನ್ಸುತ್ತೆ.

-masthmagaa.com

Contact Us for Advertisement

Leave a Reply