ಕೊರೋನಾ ರೇಸ್​​​ನಲ್ಲಿ ಮುಂಬೈ ಹಿಂದಿಕ್ಕಿದ ಬೆಂಗಳೂರು..!

masthmagaa.com:

ಬೆಂಗಳೂರು: ಆಗಸ್ಟ್​ 1ರಿಂದ 20ರವರೆಗೆ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಮುಂಬೈ ಮತ್ತು ಚೆನ್ನೈಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ಅತಿ ವೇಗವಾಗಿ ಕೊರೋನಾ ಮುನ್ನುಗ್ಗುತ್ತಿರೋದು ಆತಂಕಕಾರಿ ವಿಚಾರವಾಗಿದೆ. ಬೆಂಗಳೂರಿನಲ್ಲಿ ವೈರಸ್ ಇನ್ನೂ ಆಕ್ರಮಕ ಹಂತದಲ್ಲಿದೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್​ 1ರಿಂದ 20ರವರೆಗೆಗಿನ ಅಂಕಿ ಅಂಶಗಳನ್ನು ಗಮನಿಸಿದ್ರೆ  ಮುಂಬೈನಲ್ಲಿ ವೈರಸ್ ಹಾವಳಿ ಶೇ.16ರಷ್ಟು ಹೆಚ್ಚಾಗಿದ್ದು, ಚೆನ್ನೈನಲ್ಲಿ ಶೇ.30ರಷ್ಟು ಹೆಚ್ಚಾಗಿದೆ. ಅದೇ ಬೆಂಗಳೂರಿನಲ್ಲಿ ಬರೋಬ್ಬರಿ ಶೇ.80ರಷ್ಟು ಹೆಚ್ಚಾಗಿದೆ.

ಅತಿ ಹೆಚ್ಚು ಕೊರೋನಾ ಕೇಸ್​​ಗಳನ್ನು ಕಂಡಿರುವ ನಗರಗಳ ಪೈಕಿ ಬೆಂಗಳೂರು 5ನೇ ಸ್ಥಾನದಲ್ಲಿದ್ದು, ಮುಂಬೈ, ಚೆನ್ನೈ, ಪುಣೆ, ಥಾಣೆ ಮೊದಲ ನಾಲ್ಕು ಸ್ಥಾನಗಳನ್ನು ಪಡೆದಿವೆ.. ಈ 5 ನಗರಗಳ ಪೈಕಿ ಆಗಸ್ಟ್​​ 1ರಿಂದ 20ರವರೆಗೆ ಅತಿ ಹೆಚ್ಚು ಕೇಸ್​​ಗಳನ್ನು ಕಂಡ ನಗರಗಳ ಪಟ್ಟಿಯಲ್ಲಿ ಪುಣೆ ಮೊದಲ ಸ್ಥಾನದಲ್ಲಿದ್ರೆ, ಬೆಂಗಳೂರು 2ನೇ ಸ್ಥಾನದಲ್ಲಿದೆ.

ಬೆಂಗಳೂರಲ್ಲಿ ಮೊದಲ 50 ಸಾವಿರ ಪ್ರಕರಣಗಳು ದಾಖಲಾಗಲು 142 ದಿನಗಳನ್ನು ತೆಗೆದುಕೊಂಡಿತ್ತು. ಆದ್ರೆ ನಂತರದ 50 ಸಾವಿರ ಪ್ರಕರಣಗಳು ದಾಖಲಾಗಲು ಕೇವಲ 23 ದಿನಗಳನ್ನು ತೆಗೆದುಕೊಂಡಿರೋದು ಆತಂಕಕಾರಿ ವಿಚಾರವಾಗಿದೆ.

-masthmagaa.com

Contact Us for Advertisement

Leave a Reply