masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋಸೆಫ್ ಬೈಡೆನ್ ಗೆಲುವಿಗೆ ಸನಿಹದಲ್ಲಿದ್ದರೂ ಮ್ಯಾಜಿಕ್ ನಂಬರ್ ಇನ್ನೂ ರೀಚ್ ಆಗಿಲ್ಲ. ಚುನಾವಣೆ ಗೆಲ್ಲಲು 538 ಎಲೆಕ್ಟೊರಲ್​ ವೋಟ್​ಗಳ ಪೈಕಿ 270 ಮತಗಳನ್ನ ಪಡೆಯಬೇಕು. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಸದ್ಯ ಜೋ. ಬೈಡೆನ್ 253 ಎಲೆಕ್ಟೊರಲ್ ಮತಗಳನ್ನ ಪಡೆದ್ರೆ, ಡೊನಾಲ್ಡ್ ಟ್ರಂಪ್ 213 ವೋಟ್​ಗಳನ್ನ ಪಡೆದಿದ್ದಾರೆ. ಇನ್ನೂ 6 ರಾಜ್ಯಗಳ 71 ಎಲೆಕ್ಟೊರಲ್ ವೋಟ್​ಗಳ ಎಣಿಕೆ ಆಗಬೇಕಿದೆ. ನಿನ್ನೆ ಕೂಡ ಇಷ್ಟೇ ಇತ್ತು. ಆದ್ರೆ ಮತ ಎಣಿಕೆ ಪೂರ್ಣಗೊಳ್ಳದ 6 ರಾಜ್ಯಗಳ ಪೈಕಿ 4 ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ನಿನ್ನೆ ಮುನ್ನಡೆ ಸಾಧಿಸಿದ್ದರು. ಜೋ ಬೈಡೆನ್ 2 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದರು. ಆದ್ರೆ ಇವತ್ತು ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಬೈಡೆನ್ ಮುನ್ನಡೆ ಸಾಧಿಸಿದ್ದಾರೆ. ಆದ್ರೂ ಟ್ರಂಪ್​ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇದರೊಂದಿಗೆ ಬೈಡೆನ್ ಒಟ್ಟು 4 ರಾಜ್ಯಗಳಲ್ಲಿ (ನೆವಾಡ, ಅರಿಝೋನಾ, ಜಾರ್ಜಿಯಾ, ಪೆನ್ಸಿಲ್ವೇನಿಯಾ) ಮುನ್ನಡೆ ಸಾಧಿಸಿದಂತಾದ್ರೆ, ಟ್ರಂಪ್ ಕೇವಲ 2 ರಾಜ್ಯಗಳಲ್ಲಿ (ನಾರ್ಥ್​ ಕೆರೊಲಿನಾ ಮತ್ತು ಅಲಸ್ಕಾ) ಮುನ್ನಡೆ ಸಾಧಿಸಿದಂತಾಗಿದೆ. ಇದನ್ನ ನೋಡಿದ್ರೆ ಜೋಸೆಫ್ ಬೈಡೆನ್ ಅಮೆರಿಕ ಅಧ್ಯಕ್ಷರಾಗೋದು ಬಹುತೇಕ ಪಕ್ಕಾ ಆಗಿದೆ.

ಮತ್ತೊಂದುಕಡೆ ಅಮೆರಿಕ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್​ ಟ್ರಂಪ್, ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಅಂತ ಕೋರ್ಟ್ ಮೆಟ್ಟಿಲೇರಿದ್ರು. ವೋಟಿಂಗ್‌ ಟೈಮಿಂಗ್‌ ಮುಗಿದ ಮೇಲೆ ಬಂದ ಮತಗಳನ್ನ ಕೌಂಟಿಂಗ್​ಗೆ ತೆಗೆದುಕೊಳ್ಳಲಾಗಿದೆ. ಕೂಡಲೇ ಮತಎಣಿಕೆಯನ್ನ ನಿಲ್ಲಿಸಬೇಕು ಅಂತ ಆರೋಪಿಸಿ ಜಾರ್ಜಿಯಾ ಹಾಗೂ ಮಿಚಿಗನ್‌ ಕೋರ್ಟ್‌ಗಳಲ್ಲಿ ಟ್ರಂಪ್​ ಅರ್ಜಿ ಸಲ್ಲಿಸಿದ್ರು. ಆದ್ರೆ ಈ ಆರೋಪಕ್ಕೆ ಸೂಕ್ತ ಸಾಕ್ಷ್ಯ ಇಲ್ಲ ಅಂತ ಕೋರ್ಟ್‌ಗಳು ತೀರ್ಪು ನೀಡಿವೆ. ಈ ಮೂಲಕ ಕಾನೂನು ಹೋರಾಟದಲ್ಲೂ ಟ್ರಂಪ್​ ಸೋಲು ಅನುಭವಿಸಿದಂತಾಗಿದೆ.

-masthmagaa.com

Contact Us for Advertisement

Leave a Reply