masthmagaa.com:

ಭಾರಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುವುದು ಇಂದು ರಾತ್ರಿಯಾದ್ರೂ ಆಗಬಹುದು ಅಂತ ಚುನಾವಣಾ ಆಯೋಗ ತಿಳಿಸಿದೆ. ಇದಕ್ಕೆ ಕಾರಣ ಕೊರೋನಾ. ಹೌದು ಈ ಬಾರಿ ಬಿಹಾರದಲ್ಲಿ 4.10 ಕೋಟಿಯಷ್ಟು ಮತದಾರರು ಮತ ಚಲಾತಯಿಸಿದ್ದಾರೆ. ಈ ಪೈಕಿ ಮಧ್ಯಾಹ್ನದವರೆಗೆ ಸುಮಾರು 1 ಕೋಟಿ ಮತಗಳ ಎಣಿಕೆ ನಡೆದಿದೆ. ಇನ್ನೂ 3 ಕೋಟಿ ಮತ ಎಣಿಕೆ ಬಾಕಿ ಇದೆ. ಹಿಂದೆಲ್ಲಾ 25ರಿಂದ 26 ಸುತ್ತುಗಳ ಮತ ಎಣಿಕೆ ನಡೆಯುತ್ತಿತ್ತು. ಆದ್ರೆ ಈ ಬಾರಿ ಕೊರೋನಾ ಹಿನ್ನೆಲೆ 35 ಸುತ್ತುಗಳ ಮತ ಎಣಿಕೆ ನಡೆಯಬೇಕಿದೆ. ಹೀಗಾಗಿ ಮತ ಎಣಿಕೆ ಕಾರ್ಯ ರಾತ್ರಿವರೆಗೂ ಮುಂದುವರಿಯಬಹುದು ಅಂತ ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ.

ಮತ್ತೊಂದುಕಡೆ ಇವಿಎಂಗಳ ಬಗ್ಗೆಯೂ ಕೆಲ ಪಕ್ಷದ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಚುನಾವಣಾ ಆಯೋಗ, ‘ಇವಿಎಂಗಳನ್ನ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇದನ್ನ ಹಲವು ಬಾರಿ ಸ್ಪಷ್ಟಪಡಿಸಲಾಗಿದೆ. ಸುಪ್ರೀಂಕೋರ್ಟ್​ ಕೂಡ ಹಲವು ಸಂದರ್ಭಗಳಲ್ಲಿ ಇದನ್ನೇ ಹೇಳಿದೆ. 2017ರಲ್ಲಿ ಚುನಾವಣಾ ಆಯೋಗ ಕೂಡ ಇವಿಎಂ ಚಾಲೆಂಜ್​ ಏರ್ಪಡಿಸಿತ್ತು. ಇವಿಎಂಗಳ ಬಗ್ಗೆ ಯಾವುದೇ ಅನುಮಾನವಿಲ್ಲ’ ಅಂತ ಹೇಳಿದೆ.

-masthmgaa.com

Contact Us for Advertisement

Leave a Reply