masthmagaa.com:

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ಸಿಬಿಐ ಅಧಿಕಾರಿಗಳು ನಟಿ ರಿಹಾ ಚಕ್ರಬರ್ತಿಯನ್ನು ಮುಂಬೈನ ಡಿಆರ್​ಡಿಒ ಗೆಸ್ಟ್​ ಹೌಸ್​ನಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಸಿಬಿಐ ತಂಡದ ನೇತೃತ್ವ ವಹಿಸಿರುವ ನೂಪರ್ ಪ್ರಸಾದ್ ರಿಹಾಳ ಹೇಳಿಕೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನಿನ್ನೆಯಷ್ಟೇ ಕೆಲ ರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ರಿಹಾ ಚಕ್ರಬರ್ತಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದರು. ನನಗೆ ‘ಪುಟ್ಟ ಸುಶಾಂತ್ ಬೇಕು ಅಂತ ಕೇಳಿದ್ದೆ’ ಎಂಬುದರಿಂದ ಹಿಡಿದು ‘ಆತ ಡಿಪ್ರೆಶನ್​ ಒಳಗಾಗುತ್ತಿದ್ದ’ ಎಂಬ ವಿಚಾರದವರೆಗೆ ಹಲವು ವಿಷಯಗಳನ್ನ ಪ್ರಸ್ತಾಪಿಸಿದ್ರು. ಜೊತೆಗೆ ಕರ್ನಾಟಕದ ಕೊಡಗಿನಲ್ಲಿ ಸೆಟಲ್ ಆಗಲು ಜೂನ್​ ಆರಂಭದಿಂದಲೇ ಸುಶಾಂತ್ ತಯಾರಿ ನಡೆಸಿದ್ದ. ಜೂನ್​ 8ರಂದು ನನ್ನನ್ನ ಮನೆಯಿಂದ ಹೊರ ಕಳಿಸಿದ. ನಿರ್ದೇಶಕ ಮಹೇಶ್ ಭಟ್ ನನ್ನ ತಂದೆಯ ರೀತಿ. ಕೆಲ ಮಾಧ್ಯಮಗಳು ಆಧಾರರಹಿತ ಆರೋಪಗಳನ್ನ ಮಾಡುತ್ತಿವೆ ಅಂತ ರಿಹಾ ಚಕ್ರಬರ್ತಿ ಹೇಳಿದ್ದಾರೆ. ಸಂದರ್ಶನದ ಬೆನ್ನಲ್ಲೇ #JusticeForRhea ಎಂಬ ಹ್ಯಾಷ್​ಟ್ಯಾಗ್​ ಟ್ರೆಂಡ್ ಆಗ್ತಿದೆ.

ರಿಹಾ ಚಕ್ರಬರ್ತಿ ಸಂದರ್ಶನ ನೀಡಿದ ಕೆಲ ಹೊತ್ತಿನಲ್ಲೇ ಪತ್ರಕರ್ತ ಅರ್ನಬ್ ಗೋಸ್ವಾಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಶಾಂತ್ ಅವರ ಫ್ಯಾಮಿಲಿ ಫ್ರೆಂಡ್ ಸ್ಮಿತಾ ಎಂಬುವವರು ರಿಹಾ ಕುರಿತು ಎರಡು ಸ್ಫೋಟಕ ಹೇಳಿಕೆ ಕೊಟ್ಟುಬಿಟ್ರು. ಮೊದಲನೇದು, ‘ಸಂದರ್ಶನ ನೀಡುವ ಒಂದು ದಿನ ಮುಂಚೆ ರಿಹಾ ಚಕ್ರಬರ್ತಿ ನನಗೆ ಕಾಲ್ ಮಾಡಿದ್ದಳು. ಈ ವೇಳೆ ಆಕೆ ಕೂಡ ಇದೊಂದು ಕೊಲೆ ಎನ್ನುವ ರೀತಿ ಮಾತನಾಡಿದಳು’. ಎರಡನೇದು, ‘ರಿಹಾ ಪರ ವಕೀಲರಾದ ಸತೀಶ್​ ಮಾನ್​ಶಿಂದೆ ಅವರು ಆಕೆಗೆ ಯಾವುದೇ ಚಾರ್ಜ್ ಮಾಡಿಲ್ಲ ಅಂತ ಹೇಳಿದಳು’ ಅಂತ ಸ್ಮಿತಾ ಹೇಳಿದ್ದಾರೆ. ಇದರ ಆಡಿಯೋ ರೆಕಾರ್ಡ್​ ಕೂಡ ತನ್ನ ಬಳಿ ಇದೆ ಅಂತ ಅವರು ಹೇಳಿದ್ದಾರೆ.

ಒಂದ್ವೇಳೆ ಸುಶಾಂತ್ ಸಿಂಗ್​ದು ಕೊಲೆಯಂತಾದ್ರೆ, ಇಷ್ಟುದಿನ ರಿಹಾ ಚಕ್ರಬರ್ತಿ ಮೇಲೆಯೇ ಎಲ್ಲರಿಗೂ ಅನುಮಾನವಿತ್ತು. ಆದ್ರೀಗ ಅವರೇ ಇದೊಂದು ಕೊಲೆ ಇರಬಹುದು ಅಂತ ಹೇಳಿದ್ದಾರೆ ಅಂದ್ರೆ ಇದರ ಹಿಂದೆ ಬೇರೆಯವರ ಕೈವಾಡ ಇರಬಹುದು ಎನ್ನಲಾಗ್ತಿದೆ. ಜೊತೆಗೆ ಸತೀಶ್ ಮಾನ್​ಶಿಂದೆ ಮುಂಬೈನ ದುಬಾರಿ ವಕೀಲರಲ್ಲಿ ಒಬ್ಬರು. ಅವರು ರಿಹಾ ಪರ ಉಚಿತವಾಗಿ ವಾದ ಮಾಡಲು ಮುಂದಾಗಿರೋದು ಸುಶಾಂತ್ ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. ಸತೀಶ್ ಮಾನ್​ಶಿಂದೆ ಅವರಿಗೆ ಬೇರೆಯವರು ಹಣ ಕೊಡುತ್ತಿದ್ದಾರಾ ಎಂಬ ಆರೋಪಗಳು ಕೇಳಿ ಬಂದಿದೆ.

ಇದರ ಬೆನ್ನಲ್ಲೇ ಮಾತನಾಡಿರೋ ವಕೀಲ ಸತೀಶ್ ಮಾನ್​ಶಿಂದೆ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿದ್ದು, ‘ಉಚಿತವಾಗಿ ವಾದ ಮಾಡ್ತಿದ್ದೀನಿ ಅನ್ನೋದು ಸುಳ್ಳು. ಫೀಸ್ ಅನ್ನೋದು ನನ್ನ ಮತ್ತು ಕ್ಲೈಂಟ್​ ನಡುವಿನ ವಿಚಾರ’ ಎಂದಿದ್ದಾರೆ.

ಮತ್ತೊಂದುಕಡೆ ರಿಹಾ ಚಕ್ರಬರ್ತಿಯ ಸಹೋದರ ಶೌವಿಕ್ ಚಕ್ರಬರ್ತಿ, ಸುಶಾಂತ್ ಅವರ ಫ್ಲಾಟ್​ಮೇಟ್​ ಆಗಿದ್ದ ಸಿದ್ಧಾರ್ಥ್​ ಪಿಠಾಣಿ ಸೇರಿದಂತೆ ಹಲವರನ್ನು ಇವತ್ತು ಮತ್ತೆ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply