masthmagaa.com:

ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯ ಮೊದಲ ಮ್ಯಾಚ್​ನಲ್ಲಿ ಭಾರತ ಗೆದ್ದಿದೆ. ಆಲ್ರೌಂಡರ್​ ರವೀಂದ್ರ ಜಡೇಜಾ ತಲೆಗೆ ಬಾಲ್​ ಬಿದ್ದ ಕಾರಣ ಬದಲಿ ಆಟಗಾರನಾಗಿ ಕಣಕ್ಕಿಳಿದ ಯಜುವೇಂದ್ರ ಚಹಲ್ ಮ್ಯಾಚನ್ನೇ ಟರ್ನ್ ಮಾಡಿ ಹಾಕಿದ್ರು. ಚಹಲ್ 25 ರನ್ ಕೊಟ್ಟು 3 ವಿಕೆಟ್ ಕಿತ್ತರೆ, ಪದಾರ್ಪಣೆ ಮ್ಯಾಚಲ್ಲೇ ಗಮನಸೆಳೆದ ಎಡಗೈ ವೇಗಿ ಟಿ. ನಟರಾಜನ್ 22ಕ್ಕೆ 3 ವಿಕೆಟ್ ತೆಗೆದ್ರು. ಇದರ ಪರಿಣಾಮ ಆಸ್ಟ್ರೇಲಿಯಾವನ್ನ 11 ರನ್‌ಗಳಿಂದ ಭಾರತ ಸೋಲಿಸ್ತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. 2ನೇ ಟಿ20 ಪಂದ್ಯ ಭಾನುವಾರ ಸಿಡ್ನಿಯಲ್ಲಿ ನಡೆಯಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಕನ್ನಡಿಗ ಕೆ.ಎಲ್. ರಾಹುಲ್ ಅವರ 51 ರನ್ ಮತ್ತು ರವೀಂದ್ರ ಜಡೇಜಾ ಅವರ ಅಜೇಯ 44 ರನ್ ನೆರವಿನಿಂದ 7 ವಿಕೆಟ್‌ಗೆ 161 ರನ್ ಕಲೆ ಹಾಕ್ತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 7 ವಿಕೆಟ್‌ಗೆ 150 ರನ್ ಗಳಿಸಿ ಸೋಲೊಪ್ಪಿಕೊಳ್ತು.

-masthmagaa.com

Contact Us for Advertisement

Leave a Reply