masthmagaa.com:

ಅಮೆರಿಕ ಅಧ್ಯಕ್ಷರಾಗಿ ಜೋ. ಬೈಡೆನ್‌ ಚುನಾಯಿತರಾದ ಸುಮಾರು ಒಂದು ವಾರದ ನಂತರ ಅವರನ್ನ ಚೀನಾ ಅಭಿನಂದಿಸಿದೆ. ‘ನಾವು ಅಮೆರಿಕ ಜನರ ಆಯ್ಕೆಯನ್ನ ಗೌರವಿಸುತ್ತೇವೆ. ಬೈಡೆನ್ ಮತ್ತು ಕಮಲಾ ಹ್ಯಾರಿಸ್​ಗೆ ನಮ್ಮ ಅಭಿನಂದನೆಗಳು’ ಅಂತ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್​ ವೆನ್​ಬಿನ್ ಹೇಳಿದ್ದಾರೆ. ಚೀನಾ ಮತ್ತು ರಷ್ಯಾ ದೇಶಗಳು ಜೋ. ಬೈಡೆನ್​ಗೆ ಇನ್ನೂ ಅಭಿನಂದನೆ ಸಲ್ಲಿಸಿಲ್ಲ ಅಂತ ವರದಿಯಾಗಿತ್ತು. ಇದೀಗ ಚೀನಾ ವಿಶ್ ಮಾಡಿದೆ. ಆದ್ರೆ ರಷ್ಯಾ ಅಧ್ಯಕ್ಷ ಪುಟಿನ್ ಮಾತ್ರ ಅಧಿಕೃತ ಫಲಿತಾಂಶ ಪ್ರಕಟವಾದ ಬಳಿಕವೇ ಅಭಿನಂದನೆ ಸಲ್ಲಿಸೋದಾಗಿ ಕೂತಿದ್ದಾರೆ.

ಮತ್ತೊಂದುಕಡೆ ಟ್ರಂಪ್​ಗೆ ಅಧಿಕಾರ ಹೋದ್ರೂ ಚೀನಾ ಮೇಲಿನ ಸೇಡು ಮಾತ್ರ ಕಮ್ಮಿಯಾಗಿಲ್ಲ. ಅಧಿಕೃತವಾಗಿ ಕುರ್ಚಿ ಇಳಿಯೋ ಮೊದಲು ಚೀನಾಗೆ ಮತ್ತೊಂದು ಮಿರ್ಚಿ ಇಟ್ಟಿದ್ದಾರೆ. ಅಮೆರಿಕ ಪ್ರಜೆಗಳು ಚೀನಾದ ಕಂಪನಿಗಳಿಗೆ ಹೂಡಿಕೆ ಮಾಡೋದನ್ನ ನಿಷೇಧಿಸುವ ಕಾರ್ಯಕಾರಿ ಅದೇಶ ಹೊರಡಿಸಿದ್ದಾರೆ. ಈ ಮೂಲಕ ವ್ಯಕ್ತಿಯಾಗಲೀ ಅಥವಾ ಕಂಪನಿಗಳಾಗಲೀ ಚೀನಾ ಕಂಪನಿಗಳಲ್ಲಿ ಹೂಡಿಕೆ ಮಾಡುವುದನ್ನ ತಡೆಹಿಡಿಯಲಾಗಿದೆ. ಚೀನಾದ ತಂತ್ರಜ್ಞಾನ ಮತ್ತು ಸಂವಹನ ಕಂಪನಿಗಳಾದ ಇನ್‌ಸ್ಪುರ್ ಗ್ರೂಪ್, ಹುವಾವೇ ಮತ್ತು ಚೀನಾ ಟೆಲಿಕಮ್ಯುನಿಕೇಶನ್ಸ್ ಕಾರ್ಪ್ ಸೇರಿದಂತೆ 31 ಕಂಪನಿಗಳನ್ನ ʻಚೀನೀ ಮಿಲಿಟರಿ ಸಹಚರʼರೆಂದು ಅಮೆರಿಕ ರಕ್ಷಣಾ ಇಲಾಖೆ ಗುರುತಿಸಿದೆ. ಅದಕ್ಕಾಗಿ ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply