ಚೀನಾದಲ್ಲಿ ಕೊರೋನಾಗೆ ಸತ್ತವರೆಷ್ಟು, ಗುಣಮುಖರಾದವರೆಷ್ಟು..?

masthmagaa.com:

ಕೊರೋನಾ ಸೋಂಕಿನ ತವರು ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 25 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ ಅಂತ ಚೀನಾದ ನ್ಯಾಷನಲ್ ಹೆಲ್ತ್​ ಕಮಿಷನ್ ತಿಳಿಸಿದೆ. ನಿನ್ನೆ 47 ಪ್ರಕರಣ, ಇವತ್ತು 25 ಪ್ರಕರಣ. ಹೊಸದಾಗಿ ದೃಢಪಟ್ಟ 25 ಪ್ರಕರಣಗಳಲ್ಲಿ 24 ಪ್ರಕರಣಗಳು ವಿದೇಶದಿಂದ ಬಂದಂತಹ ಹಿನ್ನೆಲೆ ಹೊಂದಿದೆ. ಉಳಿದ 1 ಪ್ರಕರಣ ಲೋಕಲ್ ಕೇಸ್ ಆಗಿದ್ದು ಶಾನ್​ಡಾಂಗ್ ಪ್ರಾಂತ್ಯದಲ್ಲಿ ವರದಿಯಾಗಿದೆ.

ಇದನ್ನ ಹೊರತುಪಡಿಸಿ ರೋಗ ಲಕ್ಷಣ ಇಲ್ಲದ (ಎಸಿಂಪ್ಟೋಮ್ಯಾಟಿಕ್) 53 ಪ್ರಕರಣ ಪತ್ತೆಯಾಗಿದೆ. ಎಸಿಂಪ್ಟೊಮ್ಯಾಟಿಕ್ ಕೇಸ್​ಗಳನ್ನ ಚೀನಾ ಸರ್ಕಾರ ಪಾಸಿಟಿವ್ ಅಂತ ಪರಿಗಣಿಸಲ್ಲ. ಅದನ್ನ ಎಸಿಂಪ್ಟೊಮ್ಯಾಟಿಕ್ ಕೇಸಸ್​ ಅಂತಾನೇ ಹೆಲ್ತ್ ಬುಲೆಟಿನ್​ನಲ್ಲಿ ತೋರಿಸಲಾಗುತ್ತದೆ. ಇದರೊಂದಿಗೆ ಚೀನಾದಲ್ಲಿ ಇದುವರೆಗೆ 85,940 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದರಲ್ಲಿ 80,967 ಸೋಂಕಿತರು ಗುಣಮುಖರಾಗಿದ್ದು 4,634 ಸೋಂಕಿತರು ಮೃತಪಟ್ಟಿದ್ದಾರೆ. ಕೇವಲ 339 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಚೀನಾ ಹೇಳ್ತಿದೆ. ಆದ್ರೆ ಚೀನಾದ ನಂಬರ್ಸ್​ ಬಗ್ಗೆ ಸಾಕಷ್ಟು ದೇಶಗಳಿಗೆ ಅನುಮಾನವಿದೆ.

-masthmagaa.com

Contact Us for Advertisement

Leave a Reply