masthmagaa.com:

ಕೊರೋನಾ ಸೋಂಕಿನ ಹುಟ್ಟಿನ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ (WHO) ನೇತೃತ್ವದ ತಂಡ ಜನವರಿಯಲ್ಲಿ ಚೀನಾಗೆ ತೆರಳಲಿದೆ. ಇದಕ್ಕೆ ಚೀನಾ ಕೂಡ ಒಪ್ಪಿಕೊಂಡಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೈರಾಣುವಿನ ಹುಟ್ಟಿನ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ನಡೆಸಲು ಆರಂಭದಲ್ಲಿ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಅಂತಹ ತನಿಖೆಗಳು ಚೀನಾ ವಿರೋಧಿ ಅಂತ ಹೇಳಿತ್ತು. ಆದ್ರೀಗ ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತನಿಖೆಗೆ ನಾವು ಸಿದ್ಧ ಅಂತ ಚೀನಾ ಹೇಳಿದೆ. ಸೋಂಕು ಕಾಣಿಸಿಕೊಂಡು ಒಂದು ವರ್ಷದ ಬಳಿಕ ಅದರ ಹುಟ್ಟು ಮತ್ತು ಮೂಲದ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ತಂಡ ಚೀನಾಗೆ ಹೋಗ್ತಿದೆ. ಆದ್ರೆ ವುಹಾನ್​ನ ಲ್ಯಾಬ್​ನಿಂದಲೇ ಕೊರೋನಾ ಹುಟ್ಟಿದ್ದು ಅನ್ನೋದು ಸೇರಿದಂತೆ ನಾನಾ ವಾದಗಳಿವೆಯಲಾ ಅವುಗಳ ಬಗ್ಗೆ ಈ ತಂಡ ತನಿಖೆ ನಡೆಸುತ್ತಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

-masthmagaa.com

Contact Us for Advertisement

Leave a Reply