masthmagaa.com:

ಸತತ ಮೂರು ದಿನಗಳಿಂದ 100ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟು ಕೊರೋನಾ ಸೋಂಕಿನ ಎರಡನೇ ಅಲೆಯ ಭೀತಿ ಎದುರಿಸುತ್ತಿರುವ ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 45 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಹೇಳಿದೆ. ಇದರಲ್ಲಿ 39 ಪ್ರಕರಣ ಸ್ಥಳೀಯವಾಗಿ ಹರಡಿದ್ದಾಗಿದ್ದು, 6 ಪ್ರಕರಣ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದೆ.

ಸ್ಥಳೀಯ 39 ಪ್ರಕರಣಗಳ ಪೈಕಿ 31 ಪ್ರಕರಣ ಸೋಂಕಿನ ಹೊಸ ಹಾಟ್​ಸ್ಪಾಟ್ ಆಗುತ್ತಿರುವ ಷಿನ್​ಜಿಯಾಂಗ್ ಉಗರ್ ಸ್ವಾಯತ್ತ ಪ್ರದೇಶದಲ್ಲಿ ವರದಿಯಾಗಿದೆ.  ಉಳಿದ 8 ಪ್ರಕರಣ ಲಿಯೊನಾಂಗ್ ಪ್ರಾಂತ್ಯದಲ್ಲಿ ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಚೀನಾದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಹೊಸದಾಗಿ 15 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಚೀನಾದಲ್ಲಿ ಇದುವರೆಗೆ 84,337 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಪೈಕಿ 4,634 ಸೋಂಕಿತರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 78,989 ಸೋಂಕಿತರು ಗುಣಮುಖರಾಗಿದ್ದಾರೆ.

ಚೀನಾದಲ್ಲಿ ಕಳೆದ 7 ದಿನದ ಪ್ರಕರಣ:

ಜುಲೈ 26: 41 ಪ್ರಕರಣ

ಜುಲೈ 27: 61 ಪ್ರಕರಣ

ಜುಲೈ 28: 68 ಪ್ರಕರಣ

ಜುಲೈ 29: 101 ಪ್ರಕರಣ

ಜುಲೈ 30: 105 ಪ್ರಕರಣ

ಜುಲೈ 31: 127 ಪ್ರಕರಣ

ಆಗಸ್ಟ್ 1: 45 ಪ್ರಕರಣ

-masthmagaa.com

Contact Us for Advertisement

Leave a Reply