masthmagaa.com:

ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 68 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 64 ಪ್ರಕರಣ ಸ್ಥಳೀಯವಾಗಿ ಹರಡಿದ್ದಾಗಿದ್ದು, 4 ಪ್ರಕರಣ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದೆ ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಹೇಳಿದೆ.

ಸ್ಥಳೀಯವಾಗಿ ಹರಡಿದ 64 ಪ್ರಕರಣಗಳ ಪೈಕಿ 57 ಪ್ರಕರಣ​ಗಳು ಸೋಂಕಿನ ಹೊಸ ಹಾಟ್​ಸ್ಪಾಟ್ ಎನಿಸಿಕೊಂಡಿರೋ ಷಿನ್​ಜಿಯಾಂಗ್ ಉಗರ್ ಸ್ವಾಯತ್ತ ಪ್ರದೇಶದಲ್ಲಿ ವರದಿಯಾಗಿದೆ. ಉಳಿದಂತೆ ಲಿಯೋನಾಂಗ್ ಪ್ರಾಂತ್ಯದಲ್ಲಿ 6 ಮತ್ತು ಬೀಜಿಂಗ್​ನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಯಾವುದೇ ಸಾವು ಸಂಭವಿಸಿಲ್ಲ. ಹೊಸದಾಗಿ 16 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಚೀನಾದ ವಿವಿಧ ಆಸ್ಪತ್ರೆಗಳಲ್ಲಿ 391 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 20 ಜನರ ಸ್ಥಿತಿ ಗಂಭೀರವಾಗಿದೆ.

ಚೀನಾದಲ್ಲಿ ಇದುವರೆಗೆ 83,959 ಜನರಿಗೆ ಸೋಂಕು ತಗುಲಿದ್ದು 4,634 ಸೋಂಕಿತರು ಮೃತಪಟ್ಟಿದ್ದಾರೆ. 78,934 ಸೋಂಕಿತರು ಗುಣಮುಖರಾಗಿದ್ದಾರೆ ಅಂತ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ತನ್ನ ಹೆಲ್ತ್ ಬುಲೆಟಿನ್​ನಲ್ಲಿ ತಿಳಿಸಿದೆ.

ಚೀನಾದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರೋದು ಗಮನಾರ್ಹ. ಮೊನ್ನೆ 41 ಪ್ರಕರಣ, ನಿನ್ನೆ 61 ಪ್ರಕರಣ ಮತ್ತು ಇವತ್ತು 68 ಪ್ರಕರಣಗಳು ವರದಿಯಾಗಿದೆ.

-masthmagaa.com

Contact Us for Advertisement

Leave a Reply