masthmagaa.com:

9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಶಾಲೆ ಅಥವಾ ಕಾಲೇಜಿಗೆ ಹೋಗಿ ಶಿಕ್ಷಕರ ಜೊತೆ ಚರ್ಚಿಸಿ, ಅನುಮಾನಗಳನ್ನ ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದ್ರೀಗ ಅಕ್ಟೋಬರ್​ 15ರವರೆಗೆ ಯಾವುದೇ ವಿದ್ಯಾರ್ಥಿ ಶಾಲೆ ಅಥವಾ ಕಾಲೇಜಿಗೆ ಬಂದು ಶಿಕ್ಷಕರನ್ನು ಭೇಟಿಯಾಗಲು ಅವಕಾಶವಿಲ್ಲ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಉಳಿದಂತೆ ಶಾಲೆಗಳನ್ನು ಸದ್ಯಕ್ಕಂತೂ ತೆರೆಯುವ ಚಿಂತನೆ ರಾಜ್ಯ ಸರ್ಕಾರದ ಮುಂದಿಲ್ಲ ಅಂತ ನಿನ್ನೆಯಷ್ಟೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್​. ಸುರೇಶ್ ಕುಮಾರ್ ಹೇಳಿದ್ದರು. ಇದೀಗ 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಕೂಡ ಅಕ್ಟೋಬರ್ 15ರವರೆಗೆ ಶಾಲಾ-ಕಾಲೇಜುಗಳಿಗೆ ಬರುವಂತಿಲ್ಲ ಅಂತ ಆದೇಶ ಹೊರಡಿಸಲಾಗಿದೆ.

-masthmagaa.com

Contact Us for Advertisement

Leave a Reply