ಭಾರತಕ್ಕೆ ನೆಮ್ಮದಿ…ಕಡಿಮೆಯಾಗ್ತಿದೆ ಮಹಾಮಾರಿ ಕೊರೋನಾ ಕಾಟ..!

masthmagaa.com:

ದೆಹಲಿ: ದೇಶದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಇದೇ ಮೊದಲ ಬಾರಿಗೆ 8 ಲಕ್ಷಕ್ಕಿಂತ ಕಡಿಮೆ ಕೊರೊನಾ ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಸದ್ಯ 7,95,087 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 62,212 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, 837 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 74,32,680 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,12,998 ತಲುಪಿದೆ ಎಂದು ತಿಳಿಸಿದೆ. ಇನ್ನೂ 70,816 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 65,24,595 ಕ್ಕೇರಿದೆ. ಇನ್ನು ಗುಣಮುಖ ಪ್ರಮಾಣ 87.78% ಇದ್ದು, ಸಾವಿನ ಪ್ರಮಾನ 1.52% ಇದೆ. ಅಕ್ಟೋಬರ್ 16ರಂದು ದೇಶದಲ್ಲಿ ಒಟ್ಟು 9,99,090 ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದೆ.

-masthmagaa.com

Contact Us for Advertisement

Leave a Reply