masthmagaa.com:

ಭಾರತದಲ್ಲಿ ಕೊರೋನಾ ಓಟ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ 78,512 ಮಂದಿಗೆ ಸೋಂಕು ತಗುಲಿದೆ. ಜೊತೆಗೆ 971 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36,21,245ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ  64,469ಕ್ಕೆ ಏರಿಕೆಯಾಗಿದೆ. 27,74,802 ಮಂದಿ ಈವರೆಗೆ ಗುಣಮುಖರಾಗಿದ್ದು, 7,81,975 ಮಂದಿ ಇನ್ನೂ ಕೂಡ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ದೇಶದಲ್ಲಿ ಗುಣಮುಖ ಪ್ರಮಾಣ ಶೇ.76.63 ಇದ್ದು, ಸಾವಿನ ಪ್ರಮಾಣ ಶೇ.1.78ರಷ್ಟಿದೆ. ಗಮನಿಸಬೇಕಾದ ಅಂಶ ಅಂದ್ರೆ ಕಳೆದ 4 ದಿನಗಳಿಂದ ಭಾರತದಲ್ಲಿ ನಿರಂತರವಾಗಿ 75 ಸಾವಿರಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗ್ತಿದ್ದಾರೆ.

-masthmagaa.com

Contact Us for Advertisement

Leave a Reply