ಲಾಕ್​ಡೌನ್ ವೇಳೆ ತನ್ನೂರು ಸೇರಲು ವ್ಯಾಪಾರಿಯಾದ ಏರ್​ಪೋರ್ಟ್​ ಸಿಬ್ಬಂದಿ..!

masthmagaa.com:

ಗುಜರಾತ್​: ದೇಶದಲ್ಲಿ ಲಾಕ್​ಡೌನ್ ಇದ್ದು, ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗೋಕೆ ಪರದಾಡ್ತಿದ್ದಾರೆ. ಈ ನಡುವೆ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಗುಜರಾತ್ ಮೂಲದ ವ್ಯಕ್ತಿ ತನ್ನ ರಾಜ್ಯಕ್ಕೆ ತೆರಳಲು ವ್ಯಾಪಾರಿಯಾಗಿ ಬದಲಾಗಿದ್ದಾರೆ. ಪ್ರೇಮ್​ ಮೂರ್ತಿ ಪಾಂಡೆ ಎಂಬುವವರು ಮುಂಬೈ ಏರ್​ಪೋರ್ಟ್​​ನಲ್ಲಿ ಕೆಲಸ ಮಾಡುತ್ತಿದ್ದರು. ಮೊದಲು ಲಾಕ್​ಡೌನ್ ಹೇರಿದಾಗ ಮುಂಬೈನಲ್ಲೇ ಕಾಲ ಕಳೆದರು. ಆದ್ರೆ ನಂತರದಲ್ಲಿ ಲಾಕ್​​ಡೌನ್ ವಿಸ್ತರಣೆಯಾದಾಗ ಗುಜರಾತ್​​ಗೆ ತೆರಳಲು ಪ್ಲಾನ್ ಮಾಡಿದ್ರು.

ಹಣ್ಣು, ತರಕಾರಿಗಳ ವಾಹನಕ್ಕೆ ಅವಕಾಶವಿದೆ ಎಂಬುದನ್ನು ಅರಿತ ಪ್ರೇಮ್ ಮೂರ್ತಿ ಒಂದು ಪ್ಲಾನ್ ಮಾಡಿದ್ರು. ಮೊದಲಿಗೆ ಮುಂಬೈನ ನಾಸಿಕ್​​​ನಲ್ಲಿ ಒಂದು ವಾಹನವನ್ನು ಬಾಡಿಗೆಗೆ ಪಡೆದು 200 ಕಿ.ಮೀ. ದೂರದ ಪಿಂಪಲ್​ಗಾಂವ್​ಗೆ ತೆರಳಿದ್ದಾರೆ. ನಂತರ ಅಲ್ಲಿ 10 ಸಾವಿರ ರೂಪಾಯಿಗೆ ಕಲ್ಲಂಗಡಿ ಹಣ್ಣು ಖರೀದಿಸಿ, ಗಾಡಿಗೆ ಲೋಡ್ ಮಾಡಿ, ಮುಂಬೈಗೆ ಕಳುಹಿಸಿದ್ದಾರೆ. ಮುಂಬೈನಲ್ಲಿ ವ್ಯಾಪಾರಿಯೊಬ್ಬರ ಜೊತೆ ಪ್ರೇಮ್​ ಮೂರ್ತಿ ಮೊದಲೇ ಮಾತುಕತೆ ನಡೆಸಿದ್ದರು. ಹೀಗಾಗಿ ಲೋಡ್​ ಗಾಡಿ ಮಾತ್ರವೇ ಕಳುಹಿಸಿ, ತಾವು ಪಿಂಪಲ್​ಗಾಂವ್​​​ನಲ್ಲೇ ಉಳಿದುಕೊಂಡ್ರು.

ನಂತರ ಪಿಂಪಲ್​​ಗಾಂವ್​ನಲ್ಲಿ ಈರುಳ್ಳಿ ಕಡಿಮೆ ದರಕ್ಕೆ ಸಿಗುತ್ತೆ ಎಂಬುದನ್ನು ತಿಳಿದ ಪ್ರೇಮ್ ​ಮೂರ್ತಿ 9 ರೂ. 10 ಪೈಸೆ ಪ್ರತಿ ಕೆ.ಜಿಯಂತೆ 2.32 ಲಕ್ಷ ರೂಪಾಯಿ ನೀಡಿ, 25,520 ಕೆ.ಜಿ ಈರುಳ್ಳಿ ಖರೀದಿಸಿದ್ದಾರೆ. ನಂತರ ಏಪ್ರಿಲ್ 20ರಂದು 77,500 ರೂಪಾಯಿ ನೀಡಿ ಟ್ರಕ್ ಒಂದನ್ನು ಬಾಡಿಗೆಗೆ ಪಡೆದು 1,200 ಕಿಲೋಮೀಟರ್ ದೂರದ ಗುಜರಾತ್​​ನ ಅಹ್ಮದಾಬಾದ್​​ಗೆ ಹೊರಟಿದ್ದಾರೆ.

ಏಪ್ರಿಲ್ 23ರಂದು ಮುಂಡೇರಾದ ಮಾರುಕಟ್ಟೆ ತಲುಪಿದ ಪ್ರೇಮ್​ಮೂರ್ತಿಗೆ ಅಷ್ಟೊಂದು ಕ್ಯಾಶ್ ಕೊಟ್ಟು ಲೋಡು ಖರೀದಿಸುವವರು ಸಿಗಲೇ ಇಲ್ಲ. ಹೀಗಾಗಿ ತಮ್ಮ ಗ್ರಾಮ ಕೊಟ್ವಾ ಮುಬಾರ್ಕ್​ಪುರ್​​ಗೆ ಸಾಗಿಸಿ, ಅಲ್ಲಿ ಅನ್​ಲೋಡ್ ಮಾಡಿಸಿದ್ದಾರೆ. ನಂತರ ಪೊಲೀಸರ ಬಳಿ ತೆರಳಿದ ಪ್ರೇಮ್​ ಮೂರ್ತಿ ಎಲ್ಲಾ ವಿಷಯ ತಿಳಿಸಿದ್ದಾರೆ. ನಂತರ ವೈದ್ಯಾಧಿಕಾರಿಗಳು ಪ್ರೇಮ್​ ಮೂರ್ತಿ ತಪಾಸಣೆ ನಡೆಸಿದ್ದು, ಸದ್ಯ ಹೋಮ್ ಕ್ವಾರಂಟೈನ್​ನಲ್ಲಿದ್ದಾರೆ. ಅಲ್ಲದೆ ಈರುಳ್ಳಿಗೂ ಸೂಕ್ತ ವ್ಯಾಪಾರಿಗಳ ಹುಡುಕಾಟ ನಡೆಯುತ್ತಲೇ ಇದೆ.

-masthmagaa.com

Contact Us for Advertisement

Leave a Reply