ಮದುವೆ ಆಸೆಯಲ್ಲಿ 850 ಕಿ.ಮೀ ಸೈಕಲ್ ತುಳಿದ..! ಆದ್ರೆ ಆಗಿದ್ದೇ ಬೇರೆ..!!

masthmagaa.com:

ಉತ್ತರ ಪ್ರದೇಶ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಹೀಗಾಗಿ ದೂರದ ಊರುಗಳಲ್ಲಿ ಸಿಲುಕಿದ್ದ ಜನ ಸೈಕಲ್ ಮೂಲಕ, ನಡೆದುಕೊಂಡು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ಇದೇ ರೀತಿ ಪಂಜಾಬ್​ನ ಲೂದಿಯಾನದಲ್ಲಿ ಉತ್ತರ ಪ್ರದೇಶ ಮೂಲದ 24 ವರ್ಷದ ಸೋನು ಕುಮಾರ್ ಚೌವ್ಹಾಣ್ ಕೂಡ ಸಿಲುಕಿದ್ದ. ಈತ ಲೂದಿಯಾನದ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಏಪ್ರಿಲ್ 15ರಂದು ಮದುವೆ ಫಿಕ್ಸ್ ಆಗಿತ್ತು. ಹೀಗಾಗಿ ತನ್ನ ಮೂವರು ಸ್ನೇಹಿತರೊಂದಿಗೆ ಸೈಕಲ್​ನಲ್ಲಿ 850 ಕಿಲೋಮೀಟರ್ ದೂರದ ಉತ್ತರ ಪ್ರದೇಶದ ಬಲರಾಂಪುರದಲ್ಲಿರೋ ಸ್ವಗ್ರಾಮಕ್ಕೆ ಹೊರಟಿದ್ದಾನೆ.

ಹಗಲು ರಾತ್ರಿ ಸೈಕಲ್ ತುಳಿದು ಒಂದು ವಾರದ ಬಳಿಕ ತನ್ನ ಗ್ರಾಮ ತಲುಪಿದ್ದಾನೆ. ಆದ್ರೆ ಅಷ್ಟರಲ್ಲಿ ಸ್ಥಳೀಯ ಆಡಳಿತ ನಾಲ್ವರನ್ನು ಹಿಡಿದು ಕ್ವಾರಂಟೈನ್​ನಲ್ಲಿ ಇರಿಸಿದೆ. ಜೊತೆಗೆ ಎಷ್ಟೇ ಮನವಿ ಮಾಡಿದ್ರೂ ಮನೆಗೆ ಹೋಗಲು, ಮದುವೆಯಾಗಲು ಅವಕಾಶ ನೀಡಲೇ ಇಲ್ಲ. ಈಗ ಮದುವೆ ಫಿಕ್ಸ್ ಆಗಿದ್ದ ದಿನ ಕೂಡ ಕಳೆದು ಹೋಗಿದ್ದು, ನಾಲ್ವರೂ ಕ್ವಾರಂಟೈನ್​ನಲ್ಲಿದ್ದಾರೆ. ಕ್ವಾರಂಟೈನ್ ಮುಗಿದ ಬಳಿಕ ಕೊರೋನಾ ಲಕ್ಷಣ ಕಂಡು ಬರದಿದ್ದರೆ ಅವರನ್ನು ಬಿಟ್ಟು ಕಳುಹಿಸುತ್ತೇವೆ ಅಂತ ಬಲರಾಂಪುರ ಎಸ್​ಪಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply