ರಸ್ತೆಯಲ್ಲಿ ಕುಳಿತ 69 ಮಂದಿ ಕೊರೋನಾ ರೋಗಿಗಳು..!

masthmagaa.com:

ಉತ್ತರಪ್ರದೇಶ: 69 ಮಂದಿ ಕೊರೋನಾ ಸೋಂಕಿತರು ಆಸ್ಪತ್ರೆ ಮುಂದೆ ರಸ್ತೆಯಲ್ಲಿ ಕುಳಿತು ಗಂಟೆಗಟ್ಟಲೆ ಕಾದಿದ್ದಾರೆ. ಉತ್ತರ ಪ್ರದೇಶದ ಎಟಾವಹ್​ ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜು ಮುಂದೆ ಈ ಆತಂಕಕಾರಿ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಆಗ್ರಾದಿಂದ 69 ಮಂದಿ ಕೊರೋನಾ ಸೋಂಕಿತರನ್ನು ಸರ್ಕಾರಿ ಬಸ್ ಮೂಲಕ ಸೈಫೈನಲ್ಲಿರುವ ಯುನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸ್​​ಗೆ ಕಳುಹಿಸಲಾಗಿತ್ತು. ಅದರಂತೆ ಇಂದು ಬೆಳಗ್ಗೆ ಕೊರೋನಾ ರೋಗಿಗಳನ್ನು ಹೊತ್ತ ಬಸ್​​​ ಸೈಫೈ​​ನ ಮೆಡಿಕಲ್ ಕಾಲೇಜು ತಲುಪಿದೆ. ಆದ್ರೆ ಗೇಟ್ ಬಳಿಯೇ ರೋಗಿಗಳನ್ನು ನಿಲ್ಲಿಸಲಾಗಿದೆ.

ಈ ವಿಡಿಯೋ ಈಗ ವೈರಲ್ ಆಗಿದೆ. ಇವರಲ್ಲಿ ಹಲವು ರೋಗಿಗಳು ಮುಖಕ್ಕೆ ಮಾಸ್ಕ್ ಮಾತ್ರ ಹಾಕಿಕೊಂಡಿದ್ದಾರೆ. ಇವರನ್ನು ಉದ್ದೇಶಿಸಿ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ನೀವೆಲ್ಲಾ ಇಲ್ಲೇ ನಿಂತುಕೊಳ್ಳಿ.. ಇನ್ನು ಸ್ವಲ್ಪಹೊತ್ತಲ್ಲಿ ವೈದ್ಯಕೀಯ ಸಿಬ್ಬಂದಿ ಬಂದು ಲಿಸ್ಟ್​ ಮಾಡಿ, ನಿಮ್ಮನ್ನು ಆಸ್ಪತ್ರೆಗೆ ಸೇರಿಸಿಕೊಳ್ತಾರೆ. ಯಾರೂ ಓಡಿಹೋಗಲು ಪ್ರಯತ್ನಿಸಬೇಡಿ.. ಸುತ್ತಾಡಬೇಡಿ.. ನೀವು ಮಾಹಿತಿ ನೀಡದೇ ಬಂದಿದ್ದರಿಂದ ಈ ಸಮಸ್ಯೆಯಾಗಿದೆ.. ಲಿಸ್ಟ್​ ಮಾಡಲು ಸ್ವಲ್ಪ ಸಮಯ ಹಿಡಿಯುತ್ತೆ ಎಂದು ಮಾತನಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮೆಡಿಕಲ್ ಕಾಲೇಜು ವೈಸ್ ಚಾನ್ಸಲರ್​, ರೋಗಿಗಳು ಬರುವ ಬಗ್ಗೆ ನಮ್ಮ ಸಿಬ್ಬಂದಿಗೆ ಮಾಹಿತಿಯೇ ಇರಲಿಲ್ಲ. ಹೀಗಾಗಿ ಈ ಯಡವಟ್ಟು ಆಗಿದೆ ಅಂತ ಸ್ಪಷ್ಟನೆ ನೀಡಿದ್ದಾರೆ.

-masthmagaa.com

https://twitter.com/i/status/1253882801788784640

Contact Us for Advertisement

Leave a Reply