ಎರಡನೇ ಸಲ ಸೋಂಕು ತಗುಲುವುದು ತುಂಬಾ ಅಪಾಯಕಾರಿ..!

masthmagaa.com:

ಒಂದುಸಾರಿ ಕೊರೋನಾ ಸೋಂಕು ಬಂದವರಿಗೆ ಮತ್ತೆ ಸೋಂಕು ತಗುಲಬಹುದು ಅನ್ನೋದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಆದರೆ ಎರಡನೇ ಸಲ ಸೋಂಕು ತಗುಲಿದಾಗ ರೋಗದ ಲಕ್ಷಣಗಳು ಗಂಭೀರವಾಗಿರುತ್ತದೆ ಅನ್ನೋ ವಿಚಾರವೀಗ ಬೆಳಕಿಗೆ ಬಂದಿದೆ.

ಅಂದ್ರೆ ಮೊದಲ ಸಲ ಸೋಂಕು ತಗುಲಿದಾಗಗಿಂತಲೂ ಎರಡನೇ ಸಲ ಸೋಂಕು ತಗುಲಿದಾಗ ಹೆಚ್ಚು ರೋಗದ ಲಕ್ಷಣ ಮತ್ತು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತೆ ಅಂತ ಅಧ್ಯಯನವೊಂದು ತಿಳಿಸಿದೆ. ಮುಂಬೈನ ಎರಡು ಆಸ್ಪತ್ರೆಗಳು ಈ ಅಧ್ಯಯನ ನಡೆಸಿವೆ. ಆಸ್ಪತ್ರೆಯ ನಾಲ್ವರು ಸಿಬ್ಬಂದಿಗೆ ಮೊದಲು ಸೋಂಕು ತಗುಲಿದಾಗ ರೋಗದ ಲಕ್ಷಣಗಳೇ ಇರಲಿಲ್ಲ. ಮತ್ತೊಮ್ಮೆ ಸೋಂಕು ತಗುಲಿದಾಗ ಪರಿಸ್ಥಿತಿ ಭಿನ್ನವಾಗಿತ್ತು ಅಂತ ದಿ ಲ್ಯಾನ್ಸೆಟ್​ ವೆಬ್​ಸೈಟ್​ನಲ್ಲಿ ಪ್ರಕಟವಾಗಿದೆ.

-masthmagaa.com

Contact Us for Advertisement

Leave a Reply