ಮುಂದಿನ 3-4 ತಿಂಗಳಲ್ಲಿ ಭಾರತದಲ್ಲಿ ಲಸಿಕೆ ಲಭ್ಯ: ಕೇಂದ್ರ ಸರ್ಕಾರ

masthmagaa.com:

ನವದೆಹಲಿ: ಮುಂದಿನ 3-4 ತಿಂಗಳಲ್ಲಿ ಕೊರೋನಾಗೆ ಭಾರತದಲ್ಲಿ ಲಸಿಕೆ ಲಭ್ಯವಾಗಲಿದ್ದು, ಅದನ್ನ ದೇಶದ 135 ಕೋಟಿ ಜನರಿಗೆ ಹಂತ ಹಂತವಾಗಿ ಹಾಕಲಾಗುವುದು ಅಂತ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಹೇಳಿದ್ದಾರೆ. ವೈಜ್ಞಾನಿಕ ಅಂಕಿ ಅಂಶದ ಪ್ರಕಾರ ಒಂದೊಂದೇ ವರ್ಗದವರಿಗೆ ಲಸಿಕೆ ಹಾಕಲಾಗುತ್ತೆ. ಮೊದಲಿಗೆ ಆರೋಗ್ಯ ಕಾರ್ಯಕರ್ತರು ಮತ್ತು ಕೊರೋನಾ ವಾರಿಯರ್ಸ್​ಗೆ, ಬಳಿಕ ವಯಸ್ಸಾದವರಿಗೆ ಮತ್ತು ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ಸಿಗಲಿದೆ. ಲಸಿಕೆ ವಿತರಣೆಗೆ ವಿಸ್ತೃತವಾದ ಪ್ಲಾನ್ ರೂಪಿಸಲಾಗ್ತಿದೆ. 2021 ಒಳ್ಳೆಯ ವರ್ಷ ಆಗಲಿದೆ ಅನ್ನೋ ಭರವಸೆ ಇದೆ ಅಂತಾನೂ ಇದೇ ಸಂದರ್ಭದಲ್ಲಿ ಹೇಳಿದ್ರು.

-masthmagaa.com

Contact Us for Advertisement

Leave a Reply