ದೀಪಾವಳಿ ವೇಳೆಗೆ ಕೊರೋನಾ ನಿಯಂತ್ರಣ…ವರ್ಷಾಂತ್ಯಕ್ಕೆ ಲಸಿಕೆ: ಹರ್ಷವರ್ಧನ್

masthmagaa.com:

ದೆಹಲಿ: ದೀಪಾವಳಿ ವೇಳೆಗೆ ಕೊರೋನಾ ನಿಯಂತ್ರಣಕ್ಕೆ ಬರುತ್ತೆ ಅಂತ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಕೊರೋನಾ ಬಗ್ಗೆ ಮಾತನಾಡಿದ ಅವರು, ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ತುಂಬಾ ಮುಂದೆ ಇದೆ. ಹೀಗಾಗಿ ಈ ವರ್ಷದ ದೀಪಾವಳಿ ವೇಳೆಗೆ ಕೊರೋನಾ ನಿಯಂತ್ರಣಕ್ಕೆ ಬರುತ್ತೆ. ಅಲ್ಲದೆ ದೇಶದಲ್ಲಿ 3 ಲಸಿಕೆಗಳು ಮಾನವ ಪ್ರಯೋಗದ ಆರಂಭಿಕ ಹಂತದಲ್ಲಿದ್ದು, ಉಳಿದ 4 ಲಸಿಕೆಗಳು ಮಾನವ ಪ್ರಯೋಗಕ್ಕೂ ಹಿಂದಿನ ಹಂತದಲ್ಲಿವೆ.. ಈ ವರ್ಷಾಂತ್ಯದಲ್ಲಿ ಲಸಿಕೆ ಸಿದ್ಧವಾಗಲಿದೆ ಅನ್ನೋ ನಂಬಿಕೆ ನಮಗಿದೆ ಅಂತ ಹೇಳಿದ್ದಾರೆ.

ಜೊತೆಗೆ ನಾಯಕರು ಮತ್ತು ಜನತೆ ಒಟ್ಟಾಗಿ ಈ ಮಹಾಮಾರಿ ವಿರುದ್ಧ ಹೋರಾಡುವ ಕೆಲಸ ಮಾಡಿದ್ದಾರೆ. ಭಾರತಕ್ಕೆ ಕೊರೋನಾ ಬರುವ ಮುನ್ನವೇ ಈ ಬಗ್ಗೆ ಆರೋಗ್ಯಾಧಿಕಾರಿಗಳು ಸಭೆ ನಡೆಸಿದ್ದರು. ಪ್ರಧಾನಿ ಮೋದಿಯವರು ಕೊರೋನಾ ವಿರುದ್ಧ ಹೋರಾಟಕ್ಕೆ ಒಂದು ಸಮಿತಿ ರಚಿಸಿದ್ದು, ಅದರ ನೇತೃತ್ವವನ್ನು ನಾನೇ ವಹಿಸಿಕೊಂಡಿದ್ದೇನೆ. ಫೆಬ್ರವರಿವರೆಗೆ ದೇಶದಲ್ಲಿ ಒಂದೇ ಒಂದು ಲ್ಯಾಬ್​​ನಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದ್ರೆ ಈಗ ಆ ಲ್ಯಾಬ್​​ಗಳ ಸಂಖ್ಯೆ 1,583ಕ್ಕೆ ಏರಿಕೆಯಾಗಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದಾಗಿ ಇದೆಲ್ಲಾ ಸಾಧ್ಯವಾಗಿದೆ ಅಂತ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply