masthmagaa.com:

ದೇಶದಲ್ಲಿ ಮತ್ತೆ ಲಾಕ್​ಡೌನ್ ಜಾರಿಗೆ ಬರಲ್ಲ ಅಂತ ಹೇಳಲಾಗ್ತಿದೆ. ಆದ್ರೆ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್​ಡೌನ್ ಜಾರಿಯಾಗುವ ಮುನ್ಸೂಚನೆ ಸಿಕ್ಕಿದೆ. ಈ ಬಗ್ಗೆ ಸ್ವತಃ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೇ ಹಿಂಟ್ ಕೊಟ್ಟಿದ್ದಾರೆ. ‘ಮುಂದಿನ 8ರಿಂದ 10 ದಿನಗಳ ಕಾಲ ಪರಿಸ್ಥಿತಿಯನ್ನ ಅವಲೋಕಿಸಿ ಲಾಕ್​ಡೌನ್ ಬಗ್ಗೆ ನಿರ್ಧಾರ ಮಾಡುತ್ತೇವೆ’ ಅಂತ ಅಜಿತ್ ಪವಾರ್ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ‘ದೀಪಾವಳಿ ಸಂದರ್ಭದಲ್ಲಿ ಭಾರಿ ಜನಜಂಗುಳಿ ಇತ್ತು. ಆ ಜನಜಂಗುಳಿಯಲ್ಲಿ ಬಹುಶಃ ಕೊರೋನಾ ಕೂಡ ಸತ್ತು ಹೋಗಿರಬಹುದೇನು. ಈಗ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಮುನ್ಸೂಚನೆ ಸಿಕ್ಕಿದೆ’ ಅಂತಾನೂ ಹೇಳಿದ್ರು.

-masthmagaa.com

Contact Us for Advertisement

Leave a Reply